-ಪಟ್ಟಣದ ಪಾರ್ವತಮ್ಮನವರ ನಿವಾಸದಲ್ಲಿ ವರಮಹಾಲಕ್ಷ್ಮಿ ವ್ರತ ಆಚರಿಸಿ ಪೂಜೆ ಸಲ್ಲಿಸುತ್ತಿರುವ ಮಹಿಳೆಯರು.
ಶ್ರಾವಣ ಮಾಸದ ಶುಕ್ರವಾರ ವರಮಹಾಲಕ್ಷ್ಮಿಹಬ್ಬವನ್ನು ಸಂಪ್ರದಾಯದಂತೆ ಪಟ್ಟಣದ ವಿವಿಧೆಡೆ ಮಹಿಳೆಯರು ತಮ್ಮ ಮನೆಗಳಲ್ಲಿ ಸಂಭ್ರಮ ಸಡಗರದಿಂದ ಆಚರಿಸಿದರು.
ಮಹಾಲಕ್ಷ್ಮಿಗೆ ವಿಶೇಷ ಅಲಂಕಾರದೊಂದಿಗೆ ಮಂಗಳಾರತಿ ಮೂಲಕ ಪೂಜೆ ಸಲ್ಲಿಸಿ ವ್ರತವನ್ನು ನೆರವೇರಿಸಿದರು.
ಬೇಲೂರು ಪಟ್ಟಣದ ಪಾರ್ವತಮ್ಮನವರ ನಿವಾಸದಲ್ಲಿ ವರಮಹಾಲಕ್ಷ್ಮಿ ವ್ರತದ ಅಂಗವಾಗಿ ಶುಕ್ರವಾರ ವಿವಿಧ ಹೂವು, ಮಾವಿನ ತೋರಣ ಹಾಗೂ ಪೂಜಾ ಸಾಮಗ್ರಿಗಳಿಂದ ವರಮಹಾಲಕ್ಷ್ಮಿ ಮೂರ್ತಿಯನ್ನು ಅಲಂಕರಿಸಿ, ಸುಮಂಗಲಿಯರು ಸಂಪ್ರದಾಯಬದ್ಧವಾಗಿ ದೇವರಿಗೆ ಪೂಜೆ ನೆರವೇರಿಸಿ ನೈವೇದ್ಯ ಸಮರ್ಪಿಸಿದರು. ನಂತರ ಕುಟುಂಬ ಸದಸ್ಯರು ಪರಸ್ಪರ ಹಬ್ಬದ ಶುಭಾಶಯ ಹಂಚಿಕೊಂಡು ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.