ವಚನಕಾರ ದೇವರ ದಾಸಿಮಯ್ಯ ಜಯಂತಿ ಆಚರಿಸದೆ ತಾಲೂಕು ಆಡಳಿತ ಅಪಮಾನ ಮಾಡಿದೆ ಎಂದು ಆರೋಪಿಸಿ ಸಮುದಾಯದ ಮುಖಂಡರು ಮಿನಿ ವಿಧಾನಸೌಧ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಆಲೂರು: ವಚನಕಾರ ದೇವರ ದಾಸಿಮಯ್ಯ ಜಯಂತಿ ಆಚರಿಸದೆ ತಾಲೂಕು ಆಡಳಿತ ಅಪಮಾನ ಮಾಡಿದೆ ಎಂದು ಆರೋಪಿಸಿ ಸಮುದಾಯದ ಮುಖಂಡರು ಮಿನಿ ವಿಧಾನಸೌಧ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ವಿರುದ್ಧ ಧಿಕ್ಕಾರ ಕೂಗಿದರು.
ದೇವಾಂಗ ಸಂಘದ ಆಲೂರು ತಾಲೂಕಿನ ಅಧ್ಯಕ್ಷ ಅಬ್ಬನ ಕೃಷ್ಣಮೂರ್ತಿ ಮಾತನಾಡಿ, ಮಾರ್ಚ್ 23ರಂದು ರಾಜ್ಯಾದ್ಯಂತ ದೇವರ ದಾಸಿಮಯ್ಯ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಸರ್ಕಾರದ ನಿರ್ದೇಶನವಿದೆ. ಆದರೂ ಆಲೂರು ತಾಲೂಕು ಆಡಳಿತ ದೇವರ ದಾಸಿಮಯ್ಯ ಜಯಂತಿಯನ್ನು ಆಚರಿಸದೆ ಅವಮಾನ ಮಾಡಿದೆ. ಶ್ರೇಷ್ಠ ವಚನಕಾರನಿಗೆ ಅವಮಾನ ಮಾಡಿದ ತಾಲೂಕು ಆಡಳಿತ ಹಾಗೂ ತಹಸೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೇವಾಂಗ ನೇಕಾರರ ಒಕ್ಕೂಟ ಸಂಘದ ಅಧ್ಯಕ್ಷ ರಾಮಶೆಟ್ಟಿ, ದೇವಾಂಗ ಸಮಾಜದ ಆಲೂರು ನಗರ ಅಧ್ಯಕ್ಷ ಮಂಜುನಾಥ, ಪ್ರಧಾನ ಕಾರ್ಯದರ್ಶಿ ರುದ್ರಕುಮಾರ್, ಮುಖಂಡರಾದ ಮೋಹನ್ ತೊಗರನಹಳ್ಳಿ, ಕೃಷ್ಣಶಟ್ಟಿ, ಜಿ.ಕೆ ವೆಂಕಟೇಶ್ ತಾಳೂರು, ರವಿಕುಮಾರ್, ಚಂದ್ರಶೆಟ್ಟಿ, ನಂಜಪ್ಪ ಶೆಟ್ಟಿ, ಮಲ್ಲಿಕಾರ್ಜುನ, ಬೆನಕ ಇದ್ದರು.