ಅರಸೀಕೆರೆ ನಗರದ ಬಿ.ಎಚ್. ರಸ್ತೆಗೆ ಹೊಂದಿಕೊಂಡಂತಿರುವ ಸರ್ಕಾರಿ ರಾಮಣ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರ ವಿತರಿಸಲಾಯಿತು. ಚಂದ್ರಶೇಖರ್, ಕರಿಯಮ್ಮ, ಮಮತಾ, ಶಶಿಧರ್ ಇತರರಿದ್ದರು. 
ಹಾಸನ

ಭಾರತೀಯ ಶೈಕ್ಷಣಿಕ ಪರಂಪರೆ ರಕ್ಷಿಸಿ

ರವಿಕುಮಾರ್ ಪಿ. ಕೆ

ಪ್ರಮುಖ ಮುಖ್ಯಾಂಶಗಳು

  • ಅಭ್ಯುದಯ ಸೇವಾ ಸಂಸ್ಥೆ ಪದಾಧಿಕಾರಿ ಚಂದ್ರಶೇಖರ್ ಸಲಹೆ

ಅರಸೀಕೆರೆ:

ಭಾರತೀಯ ಶೈಕ್ಷಣಿಕ ಪರಂಪರೆಯ ರಕ್ಷಣೆ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳ ಮೇಲಿದೆ ಎಂದು ಅಭ್ಯುದಯ ಸೇವಾ ಸಂಸ್ಥೆ ಪದಾಧಿಕಾರಿ ಚಂದ್ರಶೇಖರ್ ಹೇಳಿದರು.

ನಗರದ ಬಿ.ಎಚ್.ರಸ್ತೆಗೆ ಹೊಂದಿಕೊಂಡಂತಿರುವ ಸರ್ಕಾರಿ ರಾಮಣ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಅಭ್ಯುದಯ ಸೇವಾ ಸಂಸ್ಥೆಯು 150 ಶಾಖೆಗಳನ್ನು ಹೊಂದಿದ್ದು, ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮೀನಾರಾಯಣ್ ಮಾರ್ಗದರ್ಶನದಂತೆ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪ್ರತಿ ವರ್ಷವೂ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುತ್ತಿದ್ದೇವೆ ಎಂದರು.
ರಾಮಣ್ಣ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಹಿರಿಯ ವಿದ್ಯಾರ್ಥಿನಿ ಶ್ವೇತಾ ಅರಸ್ ಮತ್ತು ಸಂಗಡಿಗರೊಂದಿಗೆ ಸುಮಾರು ನೂರು ಮಕ್ಕಳಿಗೆ ಕಲಿಕಾ ಸಾಮಗ್ರಿಯೊಂದಿಗೆ ನಿತ್ಯೋಪಯೋಗಿ ವಸ್ತುಗಳನ್ನು ನೀಡಿದ್ದೇವೆ. ಇಂತಹ ಕಾರ್ಯಕ್ರಮ ನಡೆಸಲು ಪ್ರೋತ್ಸಾಹಿಸಿದ ಶಾಲಾ ಅಡಳಿತ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಅಭಾರಿಯಾಗಿದ್ದೇವೆ ಎಂದರು.
ಮುಖ್ಯಶಿಕ್ಷಕಿ ಕರಿಯಮ್ಮ, ಶಿಕ್ಷಕಿ ವೀಣಾ ಮಾತನಾಡಿದರು. ಶಿಕ್ಷಕರಾದ ಆಶಾಮೇರಿ, ಮಮತಾ, ಶೀಲಾ, ಶಶಿಧರ್, ಪ್ರೀತಿ, ಪಾಲಕರಾದ ಶಶಿಕುಮಾರ್, ಕೃಷ್ಣಪ್ಪ, ಗೌತಮ್, ನಾಗರಾಜು, ನೂರ್ ಜಾನ್, ಸೌಮ್ಯಾ ಇತರರು ಹಾಜರಿದ್ದರು.