ಅರಸೀಕೆರೆ ನಗರದ ಶ್ಯಾನುಭೋಗರ ಬೀದಿ ರಸ್ತೆ ಬದಿಗೆ ಹೊಂದಿಕೊಂಡಂತಿರುವ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಉತ್ತರರಾಧನೆ ನಿಮಿತ್ತ ರಜತ ಮಂಟಪದಲ್ಲಿ ಗುರುರಾಯರ ಭವ್ಯ ಮೆರವಣಿಗೆ ನಡೆಯಿತು. 
ಹಾಸನ

ರಜತ ಮಂಟಪದಲ್ಲಿ ರಾಯರ ಮೆರವಣಿಗೆ

ಪ್ರಮುಖ ಮುಖ್ಯಾಂಶಗಳು

  • ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ವಿಶೇಷ ಪೂಜೆ

ಅರಸೀಕೆರೆ:

ನಗರದ ಶ್ಯಾನುಭೋಗರ ಬೀದಿ ರಸ್ತೆ ಬದಿಗೆ ಹೊಂದಿಕೊಂಡಂತಿರುವ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಮೂರನೇ ದಿನವಾದ ಸೋಮವಾರ ಉತ್ತರಾಧನೆ ನಿಮಿತ್ತ ರಜತ ಮಂಟಪದಲ್ಲಿ ಗುರುರಾಯರ ಭವ್ಯ ಮೆರವಣಿಗೆ ನೆರವೇರಿತು.

ಪ್ರಧಾನ ಪುರೋಹಿತ ಶ್ರೀನಿವಾಸ ಹೆಗ್ಗಡೆ, ನರಸಿಂಹ ಆಚಾರ್, ಕಿರಣ್ ಜೋಶಿ, ವೆಂಕಟೇಶ್ ಜೋಶಿ, ಪ್ರದೀಪ್ ಹೆಗ್ಗೆಡೆ ಮತ್ತು ತಂಡದಿಂದ ಶ್ರೀ ಗುರುರಾಯರ ಬೃಂದಾವನಕ್ಕೆ ಪ್ರಾತಃ ಕಾಲ ನಿರ್ಮಾಲ್ಯ ಉಷಃಕಾಲ ಪೂಜೆ, 108 ಕಳಸ ಕ್ಷೀರಾಭಿಷೇಕ ಮತ್ತು ಫಲ ಪಂಚಾಮೃತಾಭಿಷೇಕ, ತುಳಸಿ ಅರ್ಚನೆ, ಅಷ್ಟೋತ್ತರ ಪರಾಯಣ ನೆರವೇರಿಸಿದರು.
ಮಧ್ಯಾಹ್ನ ನೈವೇದ್ಯ, ಮಹಾಮಂಗಳಾರತಿಯೊಂದಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಭಕ್ತರಿಗೆ ಸಾಮೂಹಿಕ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ಶ್ರೀಮಠದ ವ್ಯವಸ್ಥಾಪಕ ರಂಗರಾವ್ ದೇಸಾಯಿ, ಸೇವಕರಾದ ಗೋವಿಂದರಾಜು, ಸ್ವಯಂ ಸೇವಕರಾದ ರಾಘವೇಂದ್ರ, ಮೂರ್ತಿ, ಚಂದ್ರಶೇಖರ್, ಶಿವಕುಮಾರ್, ನಾಗರಾಜು, ಶಿವಶಂಕರ್, ಶ್ರೀಕಾಂತ್, ಉಮೇಶ್, ಪ್ರಶಾಂತ್ ಇತರರು ಇದ್ದರು.