ಚನ್ನರಾಯಪಟ್ಟಣದ ಗದ್ದೆರಾಮೇಶ್ವರ ದೇವಾಲಯದ ರಸ್ತೆ ಅಭಿವೃದ್ಧಿಗೆ ಶಾಸಕ ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ರಾಮಗುಡಿಭಟ್ಟರು, ಆನಂದ್‌ಕಾಳೇನಹಳ್ಳಿ ಇತರರಿದ್ದರು.
- ಶಾಸಕ ಸಿ.ಎನ್.ಬಾಲಕೃಷ್ಣ ಅಭಿಮತ
- ಕಾಮಗಾರಿಗೆ ಭೂಮಿ ಪೂಜೆ
ಚನ್ನರಾಯಪಟ್ಟಣ: ಪಟ್ಟಣದ ರೈಲ್ವೆ ನಿಲ್ದಾಣದ ಬಳಿಯಿರುವ ಡಿ.ಕಾಳೇನಹಳ್ಳಿ
ಗ್ರಾಮ ವ್ಯಾಪ್ತಿಯಲ್ಲಿನ ಗದ್ದೆರಾಮೇಶ್ವರ ದೇವಾಲಯದ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸುವ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು.
ಪಟ್ಟಣದ ರೈಲ್ವೆ ನಿಲ್ದಾಣದ ಬಳಿಯಿಂದ ಗದ್ದೆರಾಮೇಶ್ವರ
ದೇವಾಲಯದವರೆಗೂ ಸುಮಾರು 700 ಮೀಟರ್ ಉದ್ದದ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗದ್ದೆರಾಮೇಶ್ವರ ದೇವಾಲಯಕ್ಕೆ ಹಲವು ಶತಮಾನಗಳ ಇತಿಹಾಸವಿದ್ದು, ಇಲ್ಲಿಗೆ ಪ್ರತಿವರ್ಷ ಸಾವಿರಾರು ಭಕ್ತರು ಆಗಮಿಸುವ
ಹಿನ್ನೆಲೆಯಲ್ಲಿನ ಭಕ್ತಾಧಿಗಳ ಅನುಕೂಲಕ್ಕಾಗಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ. ಈ ಭಾಗ ಗದ್ದೆಗಳಿಂದ ಕೂಡಿರುವ ಹಿನ್ನೆಲೆಯಲ್ಲಿ ತೇವಾಂಶ ಹೆಚ್ಚಿದ್ದು, ಗುಣಮಟ್ಟದ ರಸ್ತೆಗೆ ಆದ್ಯತೆ ನೀಡಬೇಕೆಂದು ಗುತ್ತೀಗೆದಾರರಿಗೆ ಸೂಚಸಲಾಗಿದೆ. ಡಿ.ಕಾಳೇನಹಳ್ಳಿ
ಗ್ರಾಮದ ಜನತೆ ಹಾಗೂ ಗದ್ದೆರಾಮೇಶ್ವರ ಸೇವಾಸಮಿತಿಯವರು ರಸ್ತೆ ನಿರ್ಮಾಣದ ಕುರಿತಾಗಿ ಹಲವು ಬಾರಿ ಮನವಿ ಮಾಡಿದ್ದು, ಇದೀಗ ಅವರ ಮನವಿಗೆ ಸ್ಪಂದನೆ ಸಿಕ್ಕಿ ರಸ್ತೆ ನಿರ್ಮಾಣಗೊಳ್ಳುತ್ತಿದೆ. ಇದರೊಂದಿಗೆ ಗ್ರಾಮದ ಮಂಚಿಕಟ್ಟೆಯಿಂದ ಗದ್ದೆರಾಮೇಶ್ವರ ದೇವಸ್ಥಾನದ ರಸ್ತೆ ಸಂಪರ್ಕ
ಕಲ್ಪಿಸುವ ರಸ್ತೆಯನ್ನು ಸದ್ಯ 5ಲಕ್ಷ ರೂ.ವೆಚ್ಚದಲ್ಲಿ ಜಲ್ಲಿ ರಸ್ತೆ ನಿರ್ಮಾಣ ಮಾಡಿ, ಮುಂದಿನ ಹಂತದಲ್ಲಿ ಕಾಂಕ್ರಿಟ್ ರಸ್ತೆಯಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದರು.
ಗದ್ದೆರಾಮೇಶ್ವರ ದೇವಾಲಯದ ಮುಖ್ಯಸ್ಥರಾದ
ರಾಮಗುಡಿಭಟ್ಟರು, ಗ್ರಾಮದ ಮುಖಂಡರಾದ ಆನಂದ್‌ಕಾಳೇನಹಳ್ಳಿ, ರಂಗಸ್ವಾಮಿ, ವೆಂಕಟೇಶ್, ಕಾಂತರಾಜ್, ಮೊಗಣ್ಣಗೌಡ, ಶಂಭುಲಿಂಗೇಗೌಡ, ಸುಬ್ಬೇಗೌಡ, ಶಂಕರ್, ನಾಗಣ್ಣಯ್ಯ, ಮಂಜು,
ವೀರಣ್ಣಗೌಡ, ರಂಗಣ್ಣ, ಅಡಗೂರು ಗ್ರಾಮದ ಮುಖಂಡ ನಾರಾಯಣಿ, ಗದ್ದೆರಾಮೇಶ್ವರ ಸೇವಾಸಮಿತಿ ಸದಸ್ಯ ಮಾರೇನಹಳ್ಳಿ ಚಂದ್ರು ಸೇರಿ ಗುತ್ತೇಗೆದಾರ ಶಂಕರ್ ಇತರರು ಇದ್ದರು.