ಹಾಸನ ನಗರದ ಪ್ರವಾಸಿ ಮಂದಿರದಲ್ಲಿ ಭೀಮ ಕೋರೆಂಗಾವ್ ವಿಜಯೋತ್ಸವ ಸಮಿತಿಯಿಂದ ಸಮಿತಿ ರಚನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಎಚ್.ಕೆ. ಸಂದೇಶ್, ಅಂಬುಗ ಮಲ್ಲೇಶ್, ಮಂಜು, ರಾಜಶೇಖರ್, ರಾಜು ಗೊರೂರು ಇದ್ದರು.
- ಕೋರೆಂಗಾವ್ ವಿಜಯೋತ್ಸವಕ್ಕೆ ಸಿದ್ಧತೆ
- ಆಚರಣಾ ಸಮಿತಿ ಅಧ್ಯಕ್ಷ ಎಚ್.ಕೆ. ಸಂದೇಶ್
- ಕಾರ್ಯಕ್ರಮಕ್ಕೆ ಅಂಬೇಡ್ಕರ್ ಮೊಮ್ಮಗ ಭೀಮರಾವ್ ಯಶ್ವಂತ್‌ರಾವ್ ಆಗಮಿಸುವ ಹಿನ್ನೆಲೆ
ಹಾಸನ: ಹಾಸನದಲ್ಲಿ ಮೊದಲ ಬಾರಿಗೆ ಆಚರಿಸಲಾಗುತ್ತಿರುವ 208ನೇ ವರ್ಷದ ಭೀಮ ಕೋರೆಂಗಾವ್ ವಿಜಯೋತ್ಸವಕ್ಕೆ ಅಂಬೇಡ್ಕರ್ ಮೊಮ್ಮಗ ಹಾಗೂ ಭಾರತೀಯ ಬೌದ್ಧ ಮಹಾಸಭಾದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಭೀಮರಾವ್ ಯಶ್ವಂತ್‌ರಾವ್ ಅಂಬೇಡ್ಕರ್ ಆಗಮಿಸುತ್ತಿರುವುದರಿಂದ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಸಮುದಾಯದ, ಸಮಾಜದ ಮುಖಂಡರು ಸಹಕಾರ ನೀಡಬೇಕು ಎಂದು ಆಚರಣಾ ಸಮಿತಿ ಅಧ್ಯಕ್ಷ ಎಚ್.ಕೆ. ಸಂದೇಶ್ ಮನವಿ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭೀಮ ಕೋರೆಂಗಾವ್ ವಿಜಯೋತ್ಸವ ಸಮಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸಮಿತಿ ರಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜ.20ರಂದು ಹಾಸನದ ಪ್ರಜಾಸೌಧದ ಪಕ್ಕದಲ್ಲಿರುವ ರಸ್ತೆಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಅಂಬೇಡ್ಕರ್ ಮೊಮ್ಮಗ ಭೀಮರಾವ್ ಯಶ್ವಂತ್‌ರಾವ್ ಅಂಬೇಡ್ಕರ್ ಹಾಗೂ ಭಾರತೀಯ ಭೌದ್ಧ ಮಹಾಸಭಾದ ಅಧ್ಯಕ್ಷ ಹಾಗೂ ನಿವೃತ್ತ ಡಿಸಿಪಿ ಎಸ್.ಸಿದ್ದರಾಜು ಹಾಗೂ ವಿವಿಧ ಮುಖಂಡರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಅನೇಕ ಸಭೆಗಳನ್ನು ಮಾಡಿ ಕಾರ್ಯಕ್ರಮದ ಯಶಸ್ವಿ ಕುರಿತು ಮುಖಂಡರು, ಸಮಿತಿ ಅಧ್ಯಕ್ಷರು ಚರ್ಚೆ ಮಾಡಲಾಗಿದೆ. ಕಾರ್ಯಕ್ರಮವನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ನಡೆಸಲು ಯಾವುದೇ ಗೊಂದಲಗಳಿಗೆ ಎಡೆಮಾಡಿ ಕೊಡದಂತೆ ಶಿಸ್ತುಬದ್ಧವಾಗಿ ಆಚರಿಸಬೇಕಿದೆ. ಪ್ರಚಾರ ಸಮಿತಿ, ಮೆರವಣಿಗೆ ಸಮಿತಿ, ಆಹಾರ, ಬಂಟಿಂಗ್ಸ್, ಬೈಕ್ ರ‌್ಯಾಲಿ, ವಿಜಯಸ್ತಂಭ ಮೆರವಣಿಗೆ, ಬೆಳ್ಳಿರಥ, ಆಟೋಗಳ ಸಮಿತಿ, ಸ್ವಾಗತ ಸಮಿತಿಗಳನ್ನು ರಚನೆ ಮಾಡಿ ಆಯಾಯ ಸಮಿತಿಯ ಅಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗಿದೆ ಎಲ್ಲರೂ ಸಮಿತಿಗಳಿಗೆ ಸಹಕಾರ ನೀಡುವ ಮೂಲಕ ಕಾರ್ಯಕ್ರಮ ಅರ್ಥಪೂರ್ಣಗೊಳಿಸಿಕೊಡಬೇಕು ಎಂದರು.
ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು ಡಿ.ಜೆ. ಸೌಂಡ್ಸ್ ಡೊಳ್ಳುಕುಣಿತ ಹಾಗೂ ಇತರ ಕಲಾ ತಂಡಗಳು, ಭೀಮ ಗೀತೆಗಳು ಮೆರುಗು ನೀಡಲಿವೆ ಎಂದರು.
ಬೌದ್ಧ ಧರ್ಮ ಸ್ವೀಕಾರ: ಕಾರ್ಯಕ್ರಮದಲ್ಲಿ ಭಾರತೀಯ ಬೌದ್ಧ ಮಹಾಸಭಾದ ಅನೇಕರು ಭಾಗವಹಿಸಲಿದ್ದು ಅಂದು ಬೌದ್ಧ ಧರ್ಮ ಸ್ವೀಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬೌದ್ಧಧರ್ಮ ಸ್ವೀಕಾರ ಮಾಡುವವರು ಭೀಮ ಕೋರೆಗಾಂವ್ ಆಚರಣಾ ಸಮಿತಿಗೆ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದರು.
ಭೀಮ ಕೋರೆಂಗಾವ್ ಹೆಸರಿನಲ್ಲಿ ಕೆಲವರು ಕಚೇರಿಗಳಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸ್ವಾಭಿಮಾನಿ ಹೋರಾಟಕ್ಕೆ ಧಕ್ಕೆ ಆಗದಂತೆ ಭೀಮ ಕೋರೆಂಗಾವ್ ಸಮಿತಿಯಡಿಯಲ್ಲಿರುವ ಅಧಿಕೃತ ಹಣಕಾಸು ಸಮಿತಿಗೆ ಸಮಾಜದ ನಾಯಕರು, ಮುಖಂಡರು, ದಾನಿಗಳು, ಅಂಬೇಡ್ಕರ್ ಅಭಿಮಾನಿಗಳು ಸಹಕಾರ ನೀಡಬೇಕು. ಕರಪತ್ರ ಹಿಡಿದು ಸಮಿತಿಯಲ್ಲಿ ಇಲ್ಲದವರು ಬಂದು ಸಹಾಯ ಕೇಳಿದರೆ ಮಾಡಬಾರದು ಎಂದು ಮನವಿ ಮಾಡಿದರು.
ಸಮಿತಿ ಉಪಾಧ್ಯಕ್ಷ ಅಂಬುಗ ಮಲ್ಲೇಶ್, ಕಾರ್ಯದರ್ಶಿ ಮಂಜು, ಹಿರಿಯ ಮುಖಂಡರಾದ ರಾಜಶೇಖರ್, ರಾಜು ಗೊರೂರು, ಎ.ಟಿ.ಮಲ್ಲೇಶ್, ನಾಗರಾಜು ಹೆತ್ತೂರು, ವೆಂಕಟೇಶ್ ಬ್ಯಾಕರವಳ್ಳಿ, ಶಿವಮ್ಮ, ಭಾಗ್ಯಾ ಕಲಿವೀರ್, ರಾಜೇಶ್, ಉಮೇಶ್, ರಾಜು, ತೋಟೇಶ್, ಭಾನುಪ್ರಕಾಶ್, ದೇವರಾಜು, ಚೇತನ್, ನವೀನ್, ಪ್ರದೀಪ್, ಪ್ರಸನ್ನ, ಹರೀಶ್‌ಉಳುವಾರೆ, ಗೋವಿಂದರಾಜು, ವಿಠಲ್, ಮುಖಂಡರು ಇದ್ದರು.