ಆಲೂರು ತಾಲೂಕಿನ ಮಗ್ಗೆ ರಾಯರಕೊಪ್ಪಲು ವೈ.ಎನ್. ಪುರದಲ್ಲಿರುವ ಶ್ರೀಬನಶಂಕರಿ ಅಮ್ಮನವರ ಮೂರ್ತಿಗೆ ಪೌರ್ಣಮಿ ಅಂಗವಾಗಿ ವಿಶೇಷ ಅಲಂಕಾರ ಮಾಡಿರುವುದು.
ಆಲೂರು: ತಾಲೂಕಿನ ಮಗ್ಗೆ ರಾಯರಕೊಪ್ಪಲು ವೈ.ಎನ್. ಪುರದಲ್ಲಿರುವ ಶ್ರೀಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ಸೋಮವಾರ ಪೌರ್ಣಿಮೆ ಅಂಗವಾಗಿ ಮಹಾಭಿಷೇಕ, ವಿಶೇಷ ಅಲಂಕಾರ, ಹೋಮ-ಹವನಗಳು ನೆರವೇರಿದವು.
ದೇವಾಲಯದಲ್ಲಿ ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭವಾದವು. ಬಗೆಬಗೆಯ ಪುಷ್ಪಗಳಿಂದ ದೇವಿಯನ್ನು ಅಲಂಕರಿಸಿ ಪೂಜಿಸಲಾಯಿತು.
ದೇವಾಲಯದ ಸಂಸ್ಥಾಪಕರಾದ ಭಾವಸಾರ ಕ್ಷತ್ರಿಯಾ ಮಂಡಳಿ ಚಾರಿಟಬಲ್ ಟ್ರಸ್ಟ್ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ ಇತರ ವಿಧಿ, ವಿಧಾನಗಳು ಜರುಗಿದವು.
ಲೋಕ ಕಲ್ಯಾಣಾರ್ಥವಾಗಿ ದೇವಾಲಯದ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಸ್ಥಳೀಯರು ಮಾತ್ರವಲ್ಲದೆ ಹಾಸನ, ಕೊಡಗು, ಮಡಿಕೇರಿ ಇತರ ಕಡೆಗಳಿಂದಲೂ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಪ್ರಸಾದ ವಿತರಣೆಯೂ ನಡೆಯಿತು.