ಬೇಲೂರಿಬ ಬಿಕ್ಕೋಡು ರಸ್ತೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಕೌರಿ ಸಂಜಯ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ವೆೆಂಕಟೇಶ್, ಅನಿಲ್, ಬಸವರಾಜು, ಗಿರೀಶ್, ಸುನೀಲ್, ಶ್ರೀನಿವಾಸ್, ಧರ್ಮೇಶ್, ಪ್ರಭಾಕರ್ ಇದ್ದರು. 
ಹಾಸನ

ಗುಂಡಿ ಮುಚ್ಚುವ ನೆಪದಲ್ಲಿ ಕಳಪೆ ಕಾಮಗಾರಿ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ತಾಲೂಕು ಅಧ್ಯಕ್ಷ ಕೌರಿ ಸಂಜಯ್ ನೇತೃತ್ವದಲ್ಲಿ ಪ್ರತಿಭಟನೆ
ವಿಜಯವಾಣಿ ಸುದ್ದಿಜಾಲ ಬೇಲೂರು
ಬೇಲೂರು-ಬಿಕ್ಕೋಡು ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ನೆಪದಲ್ಲಿ ಅಧಿಕಾರಿಗಳು, ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ್ದಾರೆ ಆರೋಪಿಸಿ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಕೌರಿ ಸಂಜಯ್ ನೇತೃತ್ವದಲ್ಲಿ ಕಾರ್ಯಕರ್ತರು ಗುರುವಾರ ಬಿಕ್ಕೋಡು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಕೌರಿ ಸಂಜಯ್ ಮಾತನಾಡಿ, ರಾಜಕೀಯ, ಕೀಳುಮಟ್ಟದ ಪ್ರಚಾರಕ್ಕಾಗಿ ಶಾಸಕ ಎಚ್.ಕೆ.ಸುರೇಶ್ ವಿರುದ್ಧ ಕೆಲವರು ಮಾತನಾಡುತ್ತಿದ್ದಾರೆ. ರಾಜ್ಯ ಸರ್ಕಾರ ಅನುದಾನ ನೀಡದಿದ್ದರೂ ಸಹ ಶಾಸಕರು ತಮ್ಮ ಸ್ವಂತ ಶ್ರಮದಿಂದ ಸಂಬಂಧಿಸಿದ ಸಚಿವರಿಂದ ಅನುದಾನ ತಂದು ಕ್ಷೇತ್ರದಾದ್ಯಂತ ಅಭಿವೃದ್ಧಿ ಕೆಲಸ ಮಾಡಿಸುತಿದ್ದಾರೆ. ಇದನ್ನು ಸಹಿಸಲಾಗದೆ ಶಾಸಕರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಮದು ಕಿಡಿಕಾರಿದರು.
ಶಾಸಕರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಗುಣಮಟ್ಟದ ರಸ್ತೆ ಕಾಮಗಾರಿ ಮಾಡುವಂತೆ ಸೂಚಿಸಿದ್ದರಿಂದಲೇ ನಂತರದಲ್ಲಿ ಗುಣಮಟ್ಟದ ಕಾಮಗಾರಿ ಮಾಡಲಾಗುತ್ತಿದೆ. ಕಳಪೆ ಕಾಮಗಾರಿ ನಡೆದರೆ ಶಾಸಕರ ನೇತೃತ್ವದಲ್ಲೇ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದ ಅವರು, ತಾಲೂಕಿನ ಕೆಡಿಪಿ ಸದಸ್ಯರಿಗೆ ಈಗಾಗಲೇ ಜನರು ನಿರುದ್ಯೋಗಿಗಳ ಸಂಘದವರೆಂದು ಬಿರುದು ಕೊಟ್ಟಿದ್ದಾರೆ. ಜತೆಗೆ ನಿರುದ್ಯೋಗಿಗಳ ಸಂಘದ ರಾಜ್ಯಾಧ್ಯಕ್ಷರಾಗಲು ಅವರ ನಾಯಕ ಬಿ.ಶಿವರಾಂ ಅರ್ಹರಾಗಿದ್ದು, ಬಿ.ಶಿವರಾಂ ಅವರಿಗೆ ಕ್ಷೇತ್ರದ ಅಭಿವೃದ್ಧಿ ಬೇಕಿಲ್ಲ. ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ನಿರಂತರವಾಗಿ ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗುತ್ತಿಗೆದಾರ ಕುಮಾರ್ ಮಾತನಾಡಿ, ನಮ್ಮ ಕಾರ್ಮಿಕರು ಕಾಮಗಾರಿ ಮಾಡುವಾಗ ಕೆಲ ಲೋಪಗಳಾಗಿದ್ದವು. ಅದನ್ನು ತೆಗೆಸಿ ಖುದ್ದು ನಾನೇ ಸ್ಥಳದಲ್ಲಿ ನಿಂತು ಗುಣಮಟ್ಟದ ಕೆಲಸ ಮಾಡಿಸುತ್ತಿದ್ದೇನೆ ಎಂದರು.
ಬಿಜೆಪಿ ಮುಖಂಡ ಸನ್ಯಾಸಿಹಳ್ಳಿ ನರೇಂದ್ರ, ಸನ್ಯಾಸಿಹಳ್ಳಿ ಗ್ರಾಮದ ಮಲ್ಲಿಕಾರ್ಜುನ ಮಾತನಾಡಿದರು. ಮುಖಂಡರಾದ ವೆಂಕಟೇಶ್, ಅನಿಲ್, ಬಸವರಾಜು, ಗಿರೀಶ್, ಸುನೀಲ್, ಶ್ರೀನಿವಾಸ್, ಧರ್ಮೇಶ್, ಪ್ರಭಾಕರ್ ಸೇರಿದಂತೆ ಇತರರಿದ್ದರು.