ಆಲೂರು ತಾಲೂಕಿನ ಗಂಜಿಗೆರೆ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಹಾಸನಾಂಬ ಗೆಳೆಯರ ಬಳಗದ ವತಿಯಿಂದ ಗಿಡಗಳನ್ನು ನೆಡಲಾಯಿತು. ದಿಲೀಪ್, ವಸಂತ್, ಮೋಹನ್, ರವಿಕಿರಣ್, ಲತೇಶ್, ಆನಂದ್, ನವೀನ್ ಇತರರಿದ್ದರು.  
ಹಾಸನ

ಗಂಜಿಗೆರೆ ಗ್ರಾಮದಲ್ಲಿ ಗಿಡ ನೆಡುವ ಕಾರ್ಯಕ್ರಮ

ಪ್ರಮುಖ ಮುಖ್ಯಾಂಶಗಳು

  • ಗಂಜಿಗೆರೆ ಗ್ರಾಮದಲ್ಲಿ ಗಿಡ ನೆಡುವ ಕಾರ್ಯಕ್ರಮ
  • ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಾಲಯ ಆವರಣ
  • ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಹಾಸನಾಂಬ ಗೆಳೆಯರ ಬಳಗ
ಹಾಸನ: ಆಲೂರು ತಾಲೂಕಿನ ಗಂಜಿಗೆರೆ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಹಾಸನಾಂಬ ಗೆಳೆಯರ ಬಳಗದ ವತಿಯಿಂದ ಭಾನುವಾರ ಗಿಡಗಳನ್ನು ನೆಡಲಾಯಿತು.
ಮೊದಲು ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಅರ್ಚಕ ಸುನೀಲ್ ಪೂಜೆ ಸಲ್ಲಿಸಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ಹಾಸನದಿಂದ ತೆರಳಿದ್ದ ಹಾಸನಾಂಬ ಗೆಳೆಯರ ಬಳಗದ ಸದಸ್ಯರು ಹಾಗೂ ಗಂಜಿಗೆರೆ ಗ್ರಾಮಸ್ಥರು ನೂರಾರು ಗಿಡಗಳನ್ನು ನೆಟ್ಟರು. ಪ್ರಾಣಿಗಳು ಗಿಡಗಳನ್ನು ಹಾನಿ ಮಾಡದಂತೆ ಮೆಷ್ ಅಳವಡಿಸಲಾಯಿತು.
ಗ್ರಾಮದ ಪ್ರಮುಖರಾದ ಲೋಕೇಶ್ ಮಾತನಾಡಿ, ಪರಿಸರದ ಮೇಲಿನ ಕಾಳಜಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಸರಿಯಾದ ರೀತಿಯಲ್ಲಿ ಮಳೆಯಾಗುತ್ತಿಲ್ಲ. ಆಧುನಿಕತೆಯ ಸಲುವಾಗಿ ಹೆಚ್ಚಾಗಿ ಮರಗಳನ್ನು ಕಡಿಯಲಾಗುತ್ತಿದೆ. ಪರಿಸರದ ಸಮತೋಲನಕ್ಕೆ ಹೆಚ್ಚು ಮರಗಿಡಗಳನ್ನು ಬೆಳೆಯುವಂತಾಗಬೇಕು ಎಂದರು.
ಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ಜಾತ್ರೆ ಸಂದರ್ಭದಲ್ಲಿ ದೇವರಿಗೆ ಕಳಸಕಟ್ಟಿ ಸುತ್ತಲಿನ 28 ಹಳ್ಳಿಯ ಮನೆಮನೆಗೆ ಪ್ರದಕ್ಷಿಣೆ ಹಾಕಿ ನಂತರ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ 20 ಸಾವಿರಕ್ಕೂ ಹೆಚ್ಚು ಜನರಿಗೆ ಮಾಂಸಾಹಾರ ಹಾಗೂ ಸಸಾಹಾರದ ಸಹ ಭೋಜನದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಸಂದರ್ಭದಲ್ಲಿ ಜನರು ಕುಳಿತು ಊಟಮಾಡಲು ಅನುವಾಗಲಿ ಎಂಬ ಉದ್ದೇಶದಿಂದ ಬಳಗದಿಂದ ಗಿಡನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಮುಖರಾದ ದಿಲೀಪ್, ವಸಂತ್, ಮೋಹನ್, ರವಿಕಿರಣ್, ಲತೇಶ್, ಆನಂದ್, ನವೀನ್ ಇತರರಿದ್ದರು.