ನುಗ್ಗೇಹಳ್ಳಿ ರೇಣುಕಾ ಕೃಪಾ ಭವನದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಡಾ. ಶ್ರೀಕರಿ ವೃಷಭ ಶಿವಯೋಗಿಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಪರಮೇಶ್, ಕೃಪಾ ಶಂಕರ್, ರಾಜೇಶ್ವರಿ ಶಂಕರ್, ಪುಟ್ಟರಾಜು, ಜಯರಾಮ್, ಚಂದ್ರಣ್ಣ, ಸುರೇಶ್, ಅನಿತಾ ಪರಮೇಶ್, ಇಂದ್ರಜಿತ್ ಇತರರು ಇದ್ದರು.  
ಹಾಸನ

ಆರಾಧನೆ, ದಾನ, ಧರ್ಮದಿಂದ ನೆಮ್ಮದಿ

ಪ್ರಮುಖ ಮುಖ್ಯಾಂಶಗಳು

  • Peace through worship
ನುಗ್ಗೇಹಳ್ಳಿ: ಮನುಷ್ಯನ ಶಾಂತಿ ಮತ್ತು ನೆಮ್ಮದಿಯನ್ನು ಹಣದಿಂದ ಪಡೆಯಲು ಸಾಧ್ಯವಿಲ್ಲ, ದೇವರ ಆರಾಧನೆ, ದಾನ, ಧರ್ಮದಿಂದ ಸಾಧ್ಯ ಎಂದು ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಡಾ. ಶ್ರೀ ಕರಿ ವೃಷಭ ಶಿವಯೋಗಿಶ್ವರ ಸ್ವಾಮೀಜಿ ತಿಳಿಸಿದರು.
ಹೋಬಳಿ ಕೇಂದ್ರದ ರೇಣುಕಾ ಕೃಪಾ ಭವನದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾನುವಾರ ಆಶೀರ್ವಚನ ನೀಡಿದ ಅವರು, ಮನುಷ್ಯನ ಜೀವನ ಪವಿತ್ರವಾದದ್ದು, ಅರಿತು ಬಾಳುವುದರಲ್ಲಿ ಸುಖ, ಶಾಂತಿ, ನೆಮ್ಮದಿ ಇದೆ. ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುತ್ತದೆ. ಸಮಾಜದಲ್ಲಿ ಗೌರವ, ಘನತೆ ಪ್ರಾಪ್ತವಾದ ದಿನಗಳಲ್ಲಿ ನಡೆದು ಬಂದ ದಾರಿಯನ್ನು ಯಾರು ಮರೆಯಬಾರದು ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೇ ಪರಮೇಶ್, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಜಯರಾಮ್, ಉದ್ಯಮಿ ಚಂದ್ರಣ್ಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಭಕ್ತರಹಳ್ಳಿ ಪುಟ್ಟರಾಜ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯದರ್ಶಿಗಳಾದ ಎನ್. ಆರ್. ಕೃಪಾಶಂಕರ್, ಮಾವಿನಹಳ್ಳಿ ಸುರೇಶ್, ರಾಜು, ನಿವೃತ್ತ ಶಿಕ್ಷಕ ಎಂ.ಜಿ. ಬಸವರಾಜ್, ರಾಜೇಶ್ವರಿ ಸಿ.ಬಿ. ಶಂಕರ್, ರೇಣುಕಾ ಕೃಪಾ, ಅನಿತಾ ಪರಮೇಶ್, ಶ್ರುತಿ ಅರುಣ್, ವಿಜೇತ ವಿನಯ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಇಂದ್ರಜಿತ್, ಮುದ್ದನಹಳ್ಳಿ ರಾಜಣ್ಣ, ಎಂ. ಜಿ. ಗಿರೀಶ್, ಮಸಕನಹಳ್ಳಿ ಸತೀಶ್, ದಯಾನಂದ, ಚೆನ್ನೇಗೌಡ, ನಾಗೇಶ್, ಕುಶಾಲ್, ಇತರರು ಹಾಜರಿದ್ದರು.