ಹಾಸನ ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಮೊದಲ ವರ್ಷದ ವಿದ್ಯಾರ್ಥಿಗಳ ಪಾಲಕರ ಸಭೆ ನಡೆಯಿತು. ಆರ್.ಟಿ.ದ್ಯಾವೇಗೌಡ, ಚೌಡುವಳ್ಳಿ ಜಗದೀಶ್, ಡಾ.ಅನುಪಮಾ ಇತರರಿದ್ದರು. 
ಹಾಸನ

ಮಕ್ಕಳ ಕಡೆ ಹೆಚ್ಚಿನ ಗಮನಹರಿಸಿ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ಕಡೆ ಹೆಚ್ಚಿನ ಗಮನಹರಿಸಿ
  • ಮಲೆನಾಡು ಇಂಜಿನಿಯರಿಂಗ್ ಕಾಲೇಜು ಶಿಕ್ಷಣ ಸಂಸ್ಥೆ ಅಧ್ಯಕ್ಷ ದ್ಯಾವೇಗೌಡ ಸಲಹೆ
ಹಾಸನ: ಉತ್ತಮ ವ್ಯಾಸಂಗಕ್ಕೆ ಕಾಲೇಜು ಸಂಪೂರ್ಣ ಸಹಕಾರ ನೀಡುತ್ತದೆ. ತಾಯಂದಿರು ಮಕ್ಕಳ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಮಲೆನಾಡು ಇಂಜಿನಿಯರಿಂಗ್ ಕಾಲೇಜು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಟಿ.ದ್ಯಾವೇಗೌಡ ಹೇಳಿದರು.
ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಮೊದಲ ವರ್ಷದ ವಿದ್ಯಾರ್ಥಿಗಳ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಸ್ಥೆಯಿಂದ ಸಾವಿರಾರು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಪಡೆದು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಇದ್ದಾರೆ. ನಿಮ್ಮ ಮಕ್ಕಳು ಇಂತಹ ಸಂಸ್ಥೆಯಲ್ಲಿ ಓದುತ್ತಿರುವುದು ನಿಮ್ಮ ಜವಾಬ್ದಾರಿಯಷ್ಟೇ ನಮ್ಮ ಜವಾಬ್ದಾರಿಯೂ ಆಗಿದೆ. ಉತ್ತಮ ವ್ಯಾಸಂಗಕ್ಕೆ ಕಾಲೇಜು ಸಂಪೂರ್ಣ ಸಹಕಾರ ನೀಡುತ್ತದೆ. ವಿಶೇಷವಾಗಿ ತಾಯಂದಿರು ಮಕ್ಕಳ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಎಂಸಿಇ ಕಾಲೇಜು ಪ್ರಧಾನ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಪ್ಲೇಸ್‌ಮೆಂಟ್ ಅವಕಾಶ ಕಲ್ಪಿಸಲು ಕಾಲೇಜು ಹೆಸರುವಾಸಿಯಾಗಿದೆ. ಉದ್ಯೋಗಕ್ಕೆ ತಯಾರಾಗಲು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ವ್ಯವಸ್ಥೆ ಮಾಡಲಾಗಿದೆ. ಕಾಲೇಜಿನಲ್ಲಿ 4000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಮನೋವೈದ್ಯರಾದ ಡಾ.ಅನುಪಮಾ ಮಾತನಾಡಿ, ಮಕ್ಕಳ ಓದು, ಅವರ ಸ್ನೇಹ ವಲಯ, ಮೊಬೈಲ್ ಬಳಕೆ, ನಡವಳಿಕೆ ಇವುಗಳ ಬಗ್ಗೆ ಪಾಲಕರು ಗಮನಹರಿಸಬೇಕು. ಮಕ್ಕಳಿಗೆ ಸರಿಯಾದ ದಾರಿ ತೋರಿಸಿ. ಒತ್ತಡವಿಲ್ಲದೆ ಮಾರ್ಗದರ್ಶನ ನೀಡುವುದು ಅತ್ಯಂತ ಮುಖ್ಯ ಎಂದು ಸಲಹೆ ನೀಡಿದರು.
ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಖಜಾಂಚಿ ಎಚ್.ಡಿ.ಪಾರ್ಶ್ವನಾಥ್, ಎವಿಕೆ ಪಿಯು ಕಾಲೇಜು ಉಪಾಧ್ಯಕ್ಷ ನಾಗರಾಜ್ ಜೈನ್, ಪ್ರಭಾರ ಪ್ರಾಂಶುಪಾಲ ಡಾ.ಎಚ್.ಎನ್.ನರಸಿಂಹನ್, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಇಂದ್ರ ಬಹದ್ದೂರು, ಡೀನ್‌ಗಳಾದ ಡಾ.ಕಲಾವತಿ, ಡಾ.ಎ.ಎ.ಪ್ರಸನ್ನ, ಪ್ಲೇಸ್‌ಮೆಂಟ್ ಅಧಿಕಾರಿ ನೀಲಕಂಠಪ್ಪ, ಡಾ.ಮಧು, ಡಾ.ನೀತು, ಉಪನ್ಯಾಸಕರು ಹಾಗೂ ಪಾಲಕರು ಭಾಗವಹಿಸಿದ್ದರು.