ಓರಗಲ್ ಶ್ರೀ ತಿಮ್ಮಪ್ಪ ದೇವರು 
ಹಾಸನ

ಇಂದಿನಿಂದ ಓರಗಲ್ ತಿಮ್ಮಪ್ಪಸ್ವಾಮಿ ಜಾತ್ರೆ

ಪ್ರಮುಖ ಮುಖ್ಯಾಂಶಗಳು

  • ಹಬ್ಬಕ್ಕೆ ಸಕಲ ಸಿದ್ಧತೆ
ಅರಸೀಕೆರೆ ಗ್ರಾಮಾಂತರ: ತಾಲೂಕಿನ ಬೆಂಡೆಕೆರೆ ಸಮೀಪ ಇರುವ ಸುಕ್ಷೇತ್ರ ಓರಗಲ್ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ಓರಗಲ್ ತಿಮ್ಮಪ್ಪ ಸ್ವಾಮಿಯ 36ನೇ ವರ್ಷದ ಜಾತ್ರಾ ಮಹೋತ್ಸವವನ್ನು ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಫೆ.27 ರಿಂದ ಮಾ.1 ವರೆಗೆ ಜಾತ್ರಾ ಮಹೋತ್ಸವ ಜರುಗಲಿದ್ದು, ಪ್ರತಿದಿನ ವಿಶೇಷ ಪೂಜೆ, ವಿಶೇಷ ಅಲಂಕಾರ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. 27ರಂದು ತಿಮ್ಮಪ್ಪ ಸ್ವಾಮಿ ಹಾಗೂ ಬೆಟ್ಟದ ಮತ್ತೊಂದು ಬದಿಯಲ್ಲಿರುವ ಪರ್ವತ ಮಲ್ಲೇಶ್ವರ ಸ್ವಾಮಿಗೆ ಅಭಿಷೇಕ, ಲಕ್ಷ್ಮೀ ಶ್ರೀಪದ್ಮಾವತಿ ದೇವಿಯರೊಂದಿಗೆ ಶ್ರೀನಿವಾಸ ಸ್ವಾಮಿಯ ಕಲ್ಯಾಣೋತ್ಸವ ಜರುಗಲಿದೆ.
28ರಂದು ಪರ್ವತ ಮಲ್ಲೇಶ್ವರ ಸ್ವಾಮಿ ಅವರಿಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ, ಸತ್ಯನಾರಾಯಣ ಸ್ವಾಮಿ ಮತ್ತು ಮರಳುಸಿದ್ದೇಶ್ವರ ಭಜನಾ ತಂಡದವರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ, ಮಾ.1ರಂದು ಓರಗಲ್ ತಿಮ್ಮಪ್ಪ ಸ್ವಾಮಿ ಅವರ ಉತ್ಸವ ನಡೆಯಲಿದೆ ಎಂದು ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗಭೂಷಣ್ ಗುರುವಾರ ದೇಗುಲದಲ್ಲಿ ಪತ್ರಿಕೆಗೆ ಮಾಹಿತಿ ನೀಡಿದರು.
ದೇವಾಲಯದ ಅಭಿವೃದ್ಧಿ ಸಮಿತಿಯ ಅಶೋಕ್, ಪ್ರಧಾನ ಅರ್ಚಕರಾದ ಪುಟ್ಟರಂಗನಾಥ್,ಕಾಂತರಾಜ್, ಕೃಷ್ಣಮೂರ್ತಿ, ಸೇರಿದಂತೆ ಮತ್ತು ಇತರರು ಉಪಸ್ಥಿತರಿದ್ದರು.