ವಿದ್ಯುತ್ ಸಂಸ್ಥೆಯ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ವಹಿಸುವ ಪ್ರಸ್ತಾವವನ್ನು ವಿರೋಧಿಸಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ವೈ.ಎಂ.ರೇಣು ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ನರಸಿಂಹ ಶೆಟ್ಟಿ, ರಂಗಸ್ವಾಮಿ, ಶ್ರೀನಿವಾಸ ಇತರರು ಇದ್ದರು.
ಹೊಳೆನರಸೀಪುರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಸಂಸ್ಥೆಯನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ವೈ.ಎಂ. ರೇಣು ಕುಮಾರ್‌ಗೆ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಶೆಟ್ಟಿ ಮಾತನಾಡಿ, ವಿದ್ಯುತ್ ಸಂಸ್ಥೆಯನ್ನು ಖಾಸಗಿಯವರಿಗೆ ನಿರ್ವಹಣೆ ಮಾಡಲು ಸರ್ಕಾರ ಮುಂದಾಗಿರುವುದು ಸಮಂಜಸವಲ್ಲ. ಖಾಸಗೀಕರಣದಿಂದ ರೈತರಿಗೆ ಅನ್ಯಾಯವಾಗಲಿದೆ. ವಿದ್ಯುತ್ ವೆಚ್ಚಗಳು ದುಬಾರಿಯಾಗಲಿವೆ. ರೈತರಿಗೆ ಸಿಗುತ್ತಿರುವ ಉಚಿತ ಸೌಲಭ್ಯಗಳು ಕಡಿತವಾಗುವ ಸಂಭವ ಹೆಚ್ಚಿದೆ. ಹಾಗಾಗಿ ಈ ನೀತಿಯ ವಿರುದ್ಧ ತಾಲೂಕು ರೈತರ ಸಂಘ ನಿಲ್ಲಲಿದೆ. ವಿದ್ಯುತ್ ಪ್ರಸರಣ ನಿಗಮ ಸಂಘದ ನೌಕರರು ಖಾಸಗೀಕರಣದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗೆ ನಮ್ಮ ಬೆಂಬಲ ಇದೆ ಎಂದು ತಿಳಿಸಿದರು.
ರಂಗಸ್ವಾಮಿ, ಶ್ರೀನಿವಾಸ, ಪಾರ್ಥಸಾರಥಿ, ರವಿ, ಸ್ವಾಮಿ, ಹರೀಶ ಮತ್ತಿತರರು ಇದ್ದರು.