ಅರಸೀಕೆರೆಯ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರೊಂದಿಗೆ ಡಿಐಜಿ ರಶ್ಮಿ ಚರ್ಚಿಸುತ್ತಿರುವುದು.
- ಡಿಐಜಿ ಜೆ.ಕೆ.ರಶ್ಮಿ ರೈಲ್ವೆ
- ರೈಲ್ವೆ ನಿಲ್ದಾಣಕ್ಕೆ ಭೇಟಿ
ಅರಸೀಕೆರೆ ಗ್ರಾಮಾಂತರ: ಕರ್ತವ್ಯ ಪಾಲನೆಯೊಂದಿಗೆ ಪ್ರಯಾಣಿಕರ ಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಡಿಐಜಿ ಜೆ.ಕೆ.ರಶ್ಮಿ ರೈಲ್ವೆ ಪೊಲೀಸರಿಗೆ ಸಲಹೆ ನೀಡಿದರು.
ಪ್ರಥಮ ಬಾರಿಗೆ ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಸೋಮವಾರ ಭೇಟಿ ನೀಡಿದ ಅವರು, ರೈಲ್ವೆ ಪೊಲೀಸರು ಹಾಗೂ ಪ್ರಯಾಣಿಕರೊಂದಿಗೆ ಸಮಾಲೋಚನೆ ನಡೆಸಿ ಸಲಹೆ ನೀಡಿದರು.
ರೈಲು ಪ್ರಯಾಣಿಕರಿಗೆ ಭದ್ರತೆ ನೀಡಲು ಹಾಗೂ ಅವರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ರೈಲ್ವೆ ಪೊಲೀಸ್ ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ. ಆದರೂ ಕೆಲವು ಸಂದರ್ಭಗಳಲ್ಲಿ ಪ್ರಯಾಣಿಕರನ್ನು ವಂಚಿಸಿ ಅವರ ಹಣ ಮತ್ತು ಬೆಲೆಗಳು ವಸ್ತುಗಳನ್ನು ದೋಚಿಕೊಂಡು ಹೋಗುವ ಪ್ರಕರಣ ಮರುಕಳಿಸುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಹ ರೈಲ್ವೆ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಪ್ರಯಾಣಿಕರೂ ತಾವು ಪ್ರಯಾಣಿಸುವ ಸಂದರ್ಭದಲ್ಲಿ ರೈಲು ಹಾಗೂ ನಿಲ್ದಾಣದ ಆವರಣದಲ್ಲಿ ಅನುಮಾನಾಸ್ಪದ ವ್ಯಕ್ತಿ ಕಂಡು ಬಂದರೆ ಸ್ಥಳೀಯ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದರು.