ಅರಕಲಗೂಡು ತಾಲೂಕಿನ ಮಜ್ಜನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ತಾಲೂಕು ಯೋಜನಾಧಿಕಾರಿ ಬಾಬು ಅವರು ದೇವಸ್ಥಾನ ಸಮಿತಿಯವರಿಗೆ 1 ಲಕ್ಷ ರೂ ಮೊತ್ತದ ಡಿ.ಡಿ.ಯನ್ನು ಹಸ್ತಾಂತರಿಸಿದರು. ಮಧು, ಯೋಗಣ್ಣ, ವಿನಯಕುಮಾರ್ ಇತರರಿದ್ದರು. 
ಹಾಸನ

ದೇವಸ್ಥಾನದ ಜೀರ್ಣೋದ್ಧಾರಕ್ಕೆ ಒಂದು ಲಕ್ಷ ರೂ ನೆರವು

ಅರಕಲಗೂಡು:

ತಾಲೂಕಿನ ಕೊಣನೂರು ವಲಯದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಮಜ್ಜನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಇತ್ತೀಚೆಗೆ 1 ಲಕ್ಷ ರೂ ಆರ್ಥಿಕ ನೆರವು ನೀಡಲಾಯಿತು.

ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಬಾಬು ಅವರು ದೇವಸ್ಥಾನ ಸಮಿತಿಯವರಿಗೆ ಡಿಡಿ ಹಸ್ತಾಂತರಿಸಿ ಮಾತನಾಡಿದ, ವಿವಿಧ ಕಾರ್ಯಕ್ರಮಗಳು ಹಾಗೂ ಗ್ರಾಮೀಣಾಭಿವೃದ್ಧಿಗಾಗಿ ಕೈಗೊಳ್ಳಲಾಗುತ್ತಿರುವ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ದೇವಸ್ಥಾನ ಸಮಿತಿ ಕಾರ್ಯದರ್ಶಿ ಮಧು, ನಿವೃತ್ತ ಶಿಕ್ಷಕ ಯೋಗಣ್ಣ, ಕೊಣನೂರು ವಲಯ ಮೇಲ್ವಿಚಾರಕ ವಿನಯ್ ಕುಮಾರ್, ಸೇವಾ ಪ್ರತಿನಿಧಿಗಳಾದ ಜ್ಯೋತಿ, ನಂಜುಂಡಪ್ಪ, ಸಮಿತಿ ಸದಸ್ಯರು ಹಾಗೂ ಗ್ರಾಮದ ರಘುಪತಿ, ಮೊಗಣ್ಣ ಇತರರಿದ್ದರು.

ದ್ದರು.