ಬೇಲೂರು ತಾಲೂಕಿನ ಅರೇಹಳ್ಳಿ ಸಮೀಪದ ಪಾಳ್ಯ-ತೊರಗರಹಳ್ಳಿ ಗ್ರಾಮದಲ್ಲಿರುವ ಗ್ರಾಮ ದೇವತೆ ಮಳೆಯಮ್ಮ ಹಾಗೂ ದ್ಯಾವಮ್ಮ ದೇಗುಲಕ್ಕೆ ನಾಗಭರಣ ಹಾಗೂ ದೇವರ ಮುಖ ಪದ್ಮವನ್ನು ಭಕ್ತರು ಸಮರ್ಪಿಸಿರುವುದು 
ಹಾಸನ

ಮಳೆಯಮ್ಮ, ದ್ಯಾವಮ್ಮನಿಗೆ ಮುಖಪದ್ಮ ಸಮರ್ಪಣೆ

ಬೇಲೂರು : ತಾಲೂಕಿನ ಅರೇಹಳ್ಳಿ ಸಮೀಪದ ಪಾಳ್ಯ-ತೊರಗರಹಳ್ಳಿ ಗ್ರಾಮದಲ್ಲಿರುವ ಗ್ರಾಮ ದೇವತೆ ಮಳೆಯಮ್ಮ ಹಾಗೂ ದ್ಯಾವಮ್ಮ ದೇವಾಲಯಕ್ಕೆ ಶುದ್ಧ ಬೆಳ್ಳಿಯಿಂದ ತಯಾರಿಸಿದ ನಾಗಾಭರಣ ಹಾಗೂ ದೇವಿಯ ಮುಖ ಪದ್ಮವನ್ನು ಇತ್ತೀಚೆಗೆ ಭಕ್ತರು ಸಮರ್ಪಿಸಿದರು.
ಪಾಳ್ಯ-ತೊರಗರಹಳ್ಳಿ ಗ್ರಾಮದಲ್ಲಿರುವ ಗ್ರಾಮ ದೇವತೆ ಮಳೆಯಮ್ಮ ಹಾಗೂ ದ್ಯಾವಮ್ಮ ದೇವಾಲಯಕ್ಕೆ ಭಕ್ತರು ಸಮರ್ಪಿಸಿದ 2.80 ಲಕ್ಷ ರೂ. ಮೌಲ್ಯದ 1 ಕೆಜಿ ತೂಕದ ಶುದ್ಧ ಬೆಳ್ಳಿಯಿಂದ ತಯಾರಿಸಲಾದ ನಾಗಾಭರಣ ಹಾಗೂ ದೇವಿಯ ಮುಖ ಪದ್ಮದ ಆಭರಣಗಳನ್ನು ಅರ್ಚಕರಾದ ರಾಚಯ್ಯ ಮತ್ತು ಸುರೇಶ ಸ್ವಾಮಿ ವಿಶೇಷ ಪೂಜೆ ನೆರವೇರಿಸಿ ದೇವರಿಗೆ ಸಮರ್ಪಿಸಿದರು.
ಈ ಆಭರಣಗಳ ಕುಸುರಿ ಕೆಲಸವನ್ನು ವೇಲೂರಿನ ಶಿಲ್ಪಿ ಪುರುಷೋತ್ತಮಚಾರ್ ಹಾಗೂ ಸಹೋದರರು ಮಾಡಿದ್ದಾರೆ.