ಕೋವಿಪೇಟೆ ಗ್ರಾಮದ ಯಲ್ಲಮ್ಮ ದೇವಿ ದೇವಾಲಯದ ಉಜ್ಜಯಿನಿ ದುರ್ಗಿ ದೇವಿಗೆ ಸಮರ್ಪಿಸಿದ ಬೆಳ್ಳಿಯ ನಾಗ ದೇವರ ಮೂರ್ತಿ. 
ಹಾಸನ

ಬೆಳ್ಳಿಯ ನಾಗ ದೇವರ ಮೂರ್ತಿ ಅರ್ಪಣೆ

ಬೇಲೂರು: ಪಟ್ಟಣ ಸಮೀಪದ ಕೋವಿಪೇಟೆ ಗ್ರಾಮದಲ್ಲಿರುವ ಯಲ್ಲಮ್ಮ ದೇವಿ ದೇವಾಲಯದಲ್ಲಿ ಉಜ್ಜಯಿನಿ ದುರ್ಗಿ ದೇವಿಗೆ ಬೆಳ್ಳಿಯ ನಾಗ ದೇವರ ಮೂರ್ತಿಯನ್ನು ಸೋಮವಾರ ವಿಶೇಷ ಪೂಜೆ ಸಲ್ಲಿಸಿ, ಸಮರ್ಪಿಸಲಾಯಿತು.
2 ಕೆಜಿ ಬೆಳ್ಳಿಯಿಂದ ಸುಂದರವಾಗಿ ನಾಗ ದೇವರ ಮೂರ್ತಿಯನ್ನು 6 ಲಕ್ಷ ರೂ. ವೆಚ್ಚದಲ್ಲಿ ಸುವರ್ಣ ಶಿಲ್ಪಿ ಪುರುಷೋತ್ತಮಚಾರ್ ಸಹೋದರರು ತಯಾರಿಸಿರುವ ಮೂರ್ತಿಯನ್ನು ದೇವಾಲಯದ ಪ್ರಧಾನ ಅರ್ಚಕ ಉಮೇಶ್ ಸ್ವಾಮಿ ನೇತೃತ್ವದಲ್ಲಿ ದೇವರಿಗೆ ಅರ್ಪಿಸಲಾಯಿತು. ಈ ಸಂದರ್ಭ ವಿಶೇಷ ಪೂಜೆ, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.