ಅರಸೀಕೆರೆ ವಕೀಲರ ಸಂಘದ ಚುನಾವಣೆ ವಕೀಲ ಒ.ಎ. ಶಿವಕುಮಾರ್ ನೇತೃತ್ವದ ತಂಡ ಗೆಲುವಿನ ನಗೆ ಬೀರಿದೆ. ವಕೀಲ ಡಿ. ಶ್ರೀಕಾಂತ್, ಕೆ.ಸಿ. ಶಿವರಾಜ್ ಕುಮಾರ್ ಇತರರಿದ್ದರು.  
ಹಾಸನ

ವಕೀಲರ ಸಂಘದ ಅಧ್ಯಕ್ಷರಾಗಿ ಒ.ಎ. ಶಿವಕುಮಾರ್ ಆಯ್ಕೆ

ಅರಸೀಕೆರೆ: ವಕೀಲರ ಸಂಘದ ಕಾರ್ಯಕಾರಿ ಸಮಿತಿಯ ಏಳು ಸ್ಥಾನಗಳಿಗೆ ಇತ್ತೀಚೆಗೆ ನಗರದ ನ್ಯಾಯಾಲಯದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ವಕೀಲ ಒ.ಎ. ಶಿವಕುಮಾರ್ ನೇತೃತ್ವದ ತಂಡ ಗೆಲುವಿನ ನಗೆ ಬೀರಿದೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಒ.ಎ. ಶಿವಕುಮಾರ್ 63 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಎಚ್.ಎಸ್ ರಾಘವೇಂದ್ರ 65, ಉಪಾಧ್ಯಕ್ಷ ಸಿದ್ದಮಲ್ಲಪ್ಪ 78, ಖಜಾಂಚಿ ಎಚ್.ಎಸ್. ಸವಿತಾ 74, ಜಂಟಿ ಕಾರ್ಯದರ್ಶಿ ಯು.ಕೆ ಪುರುಷೋತ್ತಮ 80, ನಿರ್ದೇಶಕರಾಗಿ ಟಿ.ಟಿ. ವಿರೂಪಾಕ್ಷ 64 ಮತ್ತು ಮಹಿಳಾ ಮೀಸಲಾತಿ ನಿರ್ದೇಶಕ ಸ್ಥಾನಕ್ಕೆ ಅನ್ನಪೂರ್ಣದೇವಿ 64 ಮತ ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿ ವಕೀಲ ಡಿ. ಶ್ರೀಕಾಂತ್, ಸಹಾಯಕ ಆಡಳಿತಾಧಿಕಾರಿ ಕೆ.ಸಿ. ಶಿವರಾಜ್ ಕುಮಾರ್, ಆಡಳಿತಾಧಿಕಾರಿ ಕಲ್ಗುಂಡಿ ಹಿರಿಯಣ್ಣ, ಮಹದೇವಪ್ಪ ವಿಜೇತರ ಹೆಸರು ಘೋಷಿಸಿದರು.