ಗೊರೂರಿನ ಉಡುವಾರೆ ಗ್ರಾಮದಲ್ಲಿ ಎ.ಎನ್.ವರದರಾಜುಲು ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ವಿಶೇಷ ವಾರ್ಷಿಕ ಶಿಬಿರ ಜರುಗಿತು. ಎಚ್.ಕೆ. ಕುಮಾರಸ್ವಾಮಿ, ಎ.ಜಿ.ರಾಮನಾಥ್, ಡಾ. ಶೋಮಶೇಖರ ಹಂದರಾಳು, ಎಸ್.ಎನ್.ಹರೀಶ್ ಇತರರಿದ್ದರು.
ಹಾಸನ: ಗೊರೂರಿನ ಉಡುವಾರೆ ಗ್ರಾಮದಲ್ಲಿ ಎ.ಎನ್.ವರದರಾಜುಲು ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ವಿಶೇಷ ವಾರ್ಷಿಕ ಶಿಬಿರ ಹಮ್ಮಿಕೊಂಡಿದ್ದರು.
ಬುಧವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ. ನಾಯಕತ್ವ ಹಾಗೂ ಸಮಾಜದ ಸವಾರ್ಂಗೀಣ ಅಭಿವೃದ್ಧಿಗೆ ಶಿಬಿರ ಸಹಕಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಯೋಗಾನರಸಿಂಹಸ್ವಾಮಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎ.ಜಿ.ರಾಮನಾಥ್ ಮಾತನಾಡಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಜತೆಗೆ ನಾಯಕತ್ವ ಗುಣ ಬೆಳಸಲು ಸಹಕಾರಿ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಶೋಮಶೇಖರ ಹಂದರಾಳು ಮಾತನಾಡಿ, ಎನ್‌ಎಸ್‌ಎಸ್ ನಿಂದ ಗ್ರಾಮಾಭಿವೃದ್ಧಿ ಹಾಗೂ ಗ್ರಾಮದ ಸ್ವಚ್ಛತೆ ಸಾಧ್ಯ. ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವಗುಣಗಳು ಇದು ಬೆಳೆಸುತ್ತದೆ ಎಂದರು.
ಶಿಬಿರಾಧಿಕಾರಿ ಎಸ್.ಎನ್.ಹರೀಶ್ ಶಿಬಿರದ ವರದಿ ಮಂಡಿಸಿದರು. ಪ್ರಮುಖರಾದ ದ್ಯಾವೇಗೌಡ, ರುದ್ರಪ್ಪ, ಬಸವರಾಜು, ಜಿ.ಆರ್. ಹೇಮರಾಜು, ಕಮಲಮ್ಮ, ಪಿಡಿಒ ಸೀಮಾ ತಾರಾನಂ, ಧರಣೇಂದ್ರ, ಜಯರಾಮ್, ಬಂಗಾರಿ ಗೌಡ, ಮಂಜುಳಾ ಪುಟ್ಟಸ್ವಾಮಿ, ರವಿ, ಡಾ.ಸೋಮಶೇಖರ್ ಹಂದ್ರಾಳ, ಕಲೀಮ್ ಉಲ್ಲಾ ಖಾನ್, ಮಧು, ಉಡುವಾರೆ ಗ್ರಾಮದ ಮುಖಂಡರು ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.