ಹಳ್ಳಿ ಮೈಸೂರು ಹೋಬಳಿಯಲ್ಲಿ ಶಾಸಕ ಎ.ಮಂಜು ಜೆಡಿಎಸ್ ಸದಸ್ಯತ್ವ ನೋಂದಣಿ ಹಾಗೂ ಚುನಾವಣಾ ಪೂರ್ವ ಬಿಎಲ್‌ಒ ನೇಮಕಾತಿ ಅಭಿಯಾನಕ್ಕೆ ಚಾಲನೆ ನೀಡಿದರು. ದಿವಾಕರ್, ಪುಟ್ಟಟಸ್ವಾಮಪ್ಪ, ಸೋಮಶೇಖರ್ ಇತರರು ಇದ್ದರು.
ಹೊಳೆನರಸೀಪುರ: ಎನ್‌ಡಿಎ ಒಕ್ಕೂಟ ಮುಂದಿನ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಕಾರ್ಯಕರ್ತರು ಈಗಿನಿಂದಲೇ ಕಾರ್ಯೋನ್ಮುಖರಾಗಬೇಕು. ಹಳ್ಳಿ ಮೈಸೂರು ಹೋಬಳಿಯಲ್ಲಿ ಕನಿಷ್ಠ 10 ಸಾವಿರ ಮಂದಿ ಸದಸ್ಯತ್ವ ನೋಂದಣಿ ಮಾಡಿಸಬೇಕು ಎಂದು ಶಾಸಕ ಎ.ಮಂಜು ಕರೆ ನೀಡಿದರು.
ಹಳ್ಳಿ ಮೈಸೂರು ಹೋಬಳಿ ವ್ಯಾಪ್ತಿಯ ಜೆಡಿಎಸ್ ಸದಸ್ಯತ್ವ ಅಭಿಯಾನ ಮತ್ತು ಬೂತ್ ಮಟ್ಟದ ಪ್ರತಿನಿಧಿಗಳ ಆಯ್ಕೆ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ತಾಂತ್ರಿಕ ಕಾರಣದಿಂದ ಮತದಾರರ ಪಟ್ಟಿಯಲ್ಲಿ ನಿವಾಸಿಗರ ಹೆಸರು ಕೈಬಿಟ್ಟು ಹೋಗಿದ್ದರೆ ಅದನ್ನು ಕಾರ್ಯಕರ್ತರು ಗಮನಿಸಬೇಕಿದೆ. ಆಯಾ ಬೂತ್ ಮಟ್ಟದ ಮತದಾರರು ಕೆಲಸದ ನಿಮಿತ್ತ ಹೊರ ಊರುಗಳಲ್ಲಿ ಉಳಿದಿದ್ದರೆ ಅವರನ್ನು ಸಂಪರ್ಕಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಇದೇ ವೇಳೆ ನೂರಾರು ಕಾರ್ಯಕರ್ತರಿಗೆ ಚುನಾವಣಾ ಪೂರ್ವ ತಯಾರಿ ಕುರಿತು ಕಾರ್ಯಾಗಾರ ಆಯೋಜಿಸಲಾಗಿತ್ತು. ಬಿಎಲ್‌ಒ ಪ್ರತಿನಿಧಿಯಾಗಿ ಪಕ್ಷದ ಮುಖಂಡ ದಿವಾಕರ್ ಹೆಸರನ್ನು ಆಯ್ಕೆ ಮಾಡಲಾಯಿತು. ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಚ್.ಎಸ್.ಪುಟ್ಟಸ್ವಾಮಪ್ಪ, ಮುಖಂಡರಾದ ಆಲಗೌಡನಹಳ್ಳಿ ಸೋಮಶೇಖರ್, ಮುತ್ತಿಗೆಹಿರಳ್ಳಿ ರಾಜೇಗೌಡ, ಸಾಂಬಶಿವಪ್ಪ, ತಾಪಂ ಮಾಜಿ ಅಧ್ಯಕ್ಷ ಗುಡ್ಡೇನಹಳ್ಳಿ ಚಂದ್ರಶೇಖರ್ ಸೇರಿದಂತೆ ಗ್ರಾಪಂ ಮಾಜಿ ಸದಸ್ಯರು ಉಪಸ್ಥಿತರಿದ್ದರು.