ಕರ್ನಾಟಕ ಸ್ಟೇಟ್ ವುಮೆನ್ ಕೋಆಪರೇಟಿವ್ ಫೆಡರೇಷನ್‌ನ ನಿರ್ದೇಶಕಿಯಾಗಿ ಜಿಪಂ ಮಾಜಿ ಅಧ್ಯಕ್ಷೆ ಬೇಲೂರಿನ ಎಂ.ವಿ.ಹೇಮಾವತಿ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೇಲೂರು: ಕರ್ನಾಟಕ ಸ್ಟೇಟ್ ವುಮೆನ್ ಕೋ ಆಪರೇಟಿವ್ ಫೆಡರೇಷನ್‌ನ ನಿರ್ದೇಶಕಿ ಸ್ಥಾನಕ್ಕೆ ಶನಿವಾರ ಬೆಂಗಳೂರಿನಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಬೇಲೂರಿನ ಎಂ.ವಿ.ಹೇಮಾವತಿ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಪಂ ಮಾಜಿ ಅಧ್ಯಕ್ಷೆ ಬೇಲೂರಿನ ಎಂ.ವಿ.ಹೇಮಾವತಿ ಮಂಜುನಾಥ್ ಅವರು ಸಹಕಾರ ಕ್ಷೇತ್ರ ಹಾಗೂ ಮಹಿಳಾ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಹಾಗೂ ಮಹಿಳಾ ಸಂಘಟನೆಗೆ ನೀಡಿರುವ ಕೊಡುಗೆ ಗುರುತಿಸಿ ಅವರನ್ನು ಕರ್ನಾಟಕ ಸ್ಟೇಟ್ ವುಮೆನ್ ಕೋಆಪರೇಟಿವ್ ಫೆಡರೇಷನ್‌ನ ಮೈಸೂರು ವಿಭಾಗದ ಹಾಸನ ಜಿಲ್ಲೆಯ ನಿರ್ದೇಶಕರಾಗಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಬೇಲೂರಿಗೆ ಕೀರ್ತಿ ತಂದಿದ್ದಾರೆ.