ಸಕಲೇಶಪುರ: ಪಟ್ಟಣದಲ್ಲಿ ದತ್ತಮಾಲಾ ಅಭಿಯಾನಕ್ಕೆ ಗುರುವಾರ ಶಾಸಕ ಸಿಮೆಂಟ್ ಮಂಜು ಚಾಲನೆ ನೀಡಿದರು. ಬಜರಂಗದಳದ ಮುಖಂಡರಾದ ವಿಜಿ ಕುಮಾರ್, ವಿಷ್ಣು ರಾವ್, ಮಹೇಂದ್ರ, ತಾಲೂಕು ಬಿಜೆಪಿ ಅಧ್ಯಕ್ಷ ವಲಳಹಳ್ಳಿ ಅಶ್ವತ್ಥ್ ಇತರರು ಇದ್ದರು.
- ಸಕಲೇಶಪುರದಲ್ಲಿ ದತ್ತಮಾಲಾ ಅಭಿಯಾನಕ್ಕೆ ಶಾಸಕ ಸಿಮೆಂಟ್ ಮಂಜು ಚಾಲನೆ
ಸಕಲೇಶಪುರ: ಪಟ್ಟಣದಲ್ಲಿ ದತ್ತಮಾಲಾ ಅಭಿಯಾನಕ್ಕೆ ಗುರುವಾರ ಶಾಸಕ ಸಿಮೆಂಟ್ ಮಂಜು ಚಾಲನೆ ನೀಡಿದರು.
ಪ್ರತಿ ವರ್ಷ ನಡೆಯುವ ದತ್ತಪೀಠ ದತ್ತಾತ್ರೇಯ ಪಾದ ದರ್ಶನ ಯಾತ್ರೆಗೆ ಈ ಬಾರಿ ಸಕಲೇಶಪುರದಿಂದ 500ಕ್ಕೂ ಹೆಚ್ಚು ಭಕ್ತರು ದತ್ತಮಾಲೆ ಧರಿಸಿ ಪಾದುಕೆ ದರ್ಶನಕ್ಕೆ ತೆರಳುತ್ತಿರುವುದರಿಂದ ಶುಭ ಕೋರಿದರು.
ಬಳಿಕ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಪ್ರತಿ ವರ್ಷ ದತ್ತಮಾಲಾಧಾರಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇದು ಧರ್ಮ ಜಾಗೃತಿ, ರಾಷ್ಟ್ರ ರಕ್ಷಣೆ ಮತ್ತು ಹಿಂದುಸಂಸ್ಕೃತಿಯ ಬಗ್ಗೆ ಯುವಜನರು ತೆಗೆದುಕೊಳ್ಳುತ್ತಿರುವ ಹೊಣೆಗಾರಿಕೆಯ ಸಂಕೇತ ಎಂದು ಹೇಳಿದರು.
ಮಹಿಳೆಯರು ದತ್ತಮಾಲೆ ಧರಿಸಿ ಪಾದುಕೆಯ ದರ್ಶನಕ್ಕೆ ತೆರಳುತ್ತಿರುವುದು ಸಂತಸ ತಂದಿದೆ. ದತ್ತಪೀಠದಲ್ಲಿ ನೇಮಿಸಿರುವ ಹಿಂದು ಅರ್ಚಕರ ಮಾರ್ಗದರ್ಶನದಲ್ಲಿ ನಿತ್ಯ ಪೂಜೆ-ಹೋಮಗಳು ನಡೆಯಬೇಕು, ಭಕ್ತರಿಗೆ ಪ್ರತಿದಿನವೂ ದತ್ತಪಾದುಕೆ ದರ್ಶನ ಸಿಗಬೇಕು ಎಂದು ತಿಳಿಸಿದರು.
ಯಾತ್ರಿಕರು ಸುರಕ್ಷಿತವಾಗಿ ಸಂಚಾರ ಮಾಡಬೇಕು. ಶಾಂತಿ, ತಾಳ್ಮೆಯಿಂದ ವಾಹನ ಸಂಚಾರ ಮಾಡಬೇಕು. ನಿಯಮಗಳನ್ನು ಪಾಲಿಸಿ, ಭಕ್ತಿಭಾವದಿಂದ ದರ್ಶನ ಪಡೆದು ಮರಳಬೇಕು. ಹಿಂದುಗಳ ಅಸ್ಮಿತೆಗಾಗಿ ಮಾಡುತ್ತಿರುವ ಹೋರಾಟಕ್ಕೆ ಬಲಾಢ್ಯರು ದತ್ತಪಾದುಕೆ ಸ್ಥಳದ ವಿಚಾರವಾಗಿ ಆಲಸ್ಯ ತೋರುತ್ತಿರುವುದು ಗಮನಕ್ಕೆ ಬಂದಿದೆ. ಆ ಸ್ಥಳವನ್ನು ಉತ್ಕನನ ಮಾಡುವುದರಿಂದ ಸತ್ಯಾಂಶ ಬಯಲಾಗುವುದು ಎಂದು ತಿಳಿಸಿದರು.
ಬಜರಂಗದಳದ ಮುಖಂಡರಾದ ವಿಜಿ ಕುಮಾರ್, ವಿಷ್ಣು ರಾವ್, ಮಹೇಂದ್ರ, ತಾಲೂಕು ಬಿಜೆಪಿ ಅಧ್ಯಕ್ಷ ವಲಳಹಳ್ಳಿ ಅಶ್ವತ್ಥ್ ಇತರರು ಇದ್ದರು.