ಆಲೂರು ತಾಲ್ಲೂಕಿನ ಕೆ.ಹೊಸಕೋಟೆ ಹೋಬಳಿ ವ್ಯಾಪ್ತಿಯ ಮಲ್ಲಾಪುರ ಗ್ರಾಮ ಪಂಚಾಯಿತಿಯ ಕಿತ್ತಗಳಲೆ ಗ್ರಾಮದಲ್ಲಿ ಮಳೆ ಹಾನಿಯಿಂದ ಮನೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೃದ್ಧನಿಗೆ ಶಾಸಕ ಸಿಮೆಂಟ್ ಮಂಜು ನೆರವಾದರು. 
ಹಾಸನ

ಸಂಕಷ್ಟದಲ್ಲಿದ್ದ ವೃದ್ಧನಿಗೆ ಶಾಸಕರ ನೆರವು

ಪ್ರಮುಖ ಮುಖ್ಯಾಂಶಗಳು

  • MLA's help
ಆಲೂರು: ಮಳೆ ಹಾನಿಯಿಂದ ಮನೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೃದ್ಧರೊಬ್ಬರಿಗೆ ಶಾಸಕ ಸಿಮೆಂಟ್ ಮಂಜು ನೆರವಾಗಿ ಮಾನವೀಯತೆ ಮೆರೆದಿದ್ದಾರೆ. ತಾಲೂಕಿನ ಕೆ.ಹೊಸಕೋಟೆ ಹೋಬಳಿ ವ್ಯಾಪ್ತಿಯ ಮಲ್ಲಾಪುರ ಗ್ರಾಮ ಪಂಚಾಯಿತಿಯ ಕಿತ್ತಗಳಲೆ ಗ್ರಾಮದ ಕೆಂಚಯ್ಯ ಅವರು ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಸಿಮೆಂಟ್ ಮಂಜು ಸ್ಥಳಕ್ಕೆ ಭೇಟಿ ನೀಡಿ ಪಿಡಿಒ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಕೆಂಚಯ್ಯ ಅವರಿಗೆ ಶೀಘ್ರ ಪರಿಹಾರ ದೊರೆಯಲು ಅಗತ್ಯ ಕ್ರಮಕ್ಕೆ ಸೂಚಿಸಿದರು. ತಾತ್ಕಾಲಿಕ ವಸತಿ ಹಾಗೂ ಸರ್ಕಾರದ ಪರಿಹಾರ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.