ಸಕಲೇಶಪುರದ ಕಂದಾಯ ಇಲಾಖೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಗರ್ ಹುಕುಂ ಸಮಿತಿ ಸಭೆಯಲ್ಲಿ ಶಾಸಕ ಸಿಮೆಂಟ್ ಮಂಜು ಮಾತನಾಡಿದರು. ಸಮಿತಿ ಸದಸ್ಯರಾದ ಉದಯ,ದೇವರಾಜ್ ಇತರರು ಉಪಸ್ಥಿತರಿದ್ದರು.
ಸಕಲೇಶಪುರ : ಸಾರ್ವಜನಿಕರನ್ನು ವಿನಾಕಾರಣ ಕಚೇರಿಗೆ ಅಲೆಸುವುದನ್ನು ಸಹಿಸಲಾಗುವುದಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಕಂದಾಯ ಇಲಾಖೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಗರ್ ಹುಕುಂ ಸಮಿತಿ ಸಭೆಯಲ್ಲಿ ಮಾತನಾಡಿ, ಬಗರ್ ಹುಕುಂ 94 ಸಿ ಅಡಿ ಅರ್ಜಿ ಸಲ್ಲಿಸಿರುವ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಬೇಗ ಮಾಡಿ ಕೊಡಿ.
ವಿನಾಕಾರಣ ಜನರನ್ನು ಕಚೇರಿಗೆ ಅಲೆದಾಡಿಸಬೇಡಿ ಎಂದರು. ಅಧಿಕಾರಿಗಳೇ ಅರ್ಜಿದಾರರ ಮನೆಗೆ ತೆರಳಿ ನೈಜತೆಯನ್ನು ಪರಿಶೀಲಿಸಿ ತಕ್ಷಣವೇ ಅವರಿಗೆ ಹಕ್ಕು ಪತ್ರ ವಿತರಿಸಬೇಕು. ಯಾವುದೆ ಕಾರಣಕ್ಕೂ ಮಧ್ಯ ವರ್ತಿಗಳಿಗೆ ಅವಕಾಶ ಕಲ್ಪಿಸಬಾರದು. ಎಂದು ಅವರು ಸೂಚಿಸಿದರು.
ಬಗರ್ ಹುಕು ಸಮಿತಿ ಸಭೆಗೆ ಇಡಲಾಗಿದ್ದ 30 ಅರ್ಜಿಗಳಲ್ಲಿ 22 ಅರ್ಜಿಗಳನ್ನು ಪುರಸ್ಕರಿಸಲಾಯಿತು.
ಈ ವೇಳೆ ಬಗರ್ ಹುಕುಂ ಸಮಿತಿ ಸದಸ್ಯರಾದ ಉದಯ,ದೇವರಾಜ್ ಉಪಸ್ಥಿತರಿದ್ದರು.