ಹೊಳೆನರಸೀಪುರ ತಾಲೂಕಿನ ದೊಡ್ಡ ಕಾಡನೂರು-ಹಿರಿತಾಳ ರಸ್ತೆ ಅಭಿವೃದ್ಧಿಗೆ ಶಾಸಕ ಎ.ಮಂಜು ಚಾಲನೆ ನೀಡಿದರು. ಪುಟ್ಟ ಸೋಮಪ್ಪ, ಶಿವಸ್ವಾಮಿ, ಧರ್ಮಪಾಲಾಕ್ಷ, ತೇಜುಸ್ವಾಮಿ, ಈಶ್ವರ ಇದ್ದರು.
ಹೊಳೆನರಸೀಪುರ: ಗುಣಮಟ್ಟದ ಕಾಮಗಾರಿಯನ್ನು ನಡೆಸಲು ಇಂಜಿನಿಯರ್ ಹಾಗೂ ಗುತ್ತಿಗೆದಾರರು ಗಮನಹರಿಸಬೇಕು ಎಂದು ಶಾಸಕ ಎ.ಮಂಜು ಸೂಚಿಸಿದರು.
ತಾಲೂಕಿನ ಹಳ್ಳಿಮೈಸೂರು ಹೋಬಳಿಯ ದೊಡ್ಡಕಾಡನೂರು ಗ್ರಾಮದಿಂದ ಹಿರಿತಾಳಲು ಸಂಪರ್ಕ ರಸ್ತೆಯನ್ನು 1.50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಕಾಮಗಾರಿ ತುರ್ತಾಗಿ ಪ್ರಾರಂಭಿಸಿ ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರರು ಗಮನಹರಿಸಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಪುಟ್ಟಸೋಮಪ್ಪ, ಗ್ರಾಪಂ ಮಾಜಿ ಸದಸ್ಯ ಧರ್ಮಪಾಲಾಕ್ಷ, ತೇಜುಸ್ವಾಮಿ, ಗುತ್ತಿಗೆದಾರ ಶಿವಸ್ವಾಮಿ, ಈಶ್ವರ, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.