ನುಗ್ಗೇಹಳ್ಳಿ ಎಪಿಎಂಸಿ ಆವರಣದ ಮಳಿಗೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಪ್ರಕ್ರಿಯೆಗೆ ಮಂಜುನಾಥ್ ಚಾಲನೆ ನೀಡಿದರು. ಚಿರಂಜೀವಿ ಪ್ರಕಾಶ್, ಗುರು, ಸಂತೋಷ್, ಚಿಕ್ಕೇಗೌಡ, ಉಮೇಶ್, ಮಂಜುನಾಥ್, ಸತೀಶ್, ರಘು, ಇದ್ದರು. 
ಹಾಸನ

ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ಮಂಜುನಾಥ್ ಮಾಹಿತಿ
ನುಗ್ಗೇಹಳ್ಳಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರಾಗಿ ಖರೀದಿ ಪ್ರಕ್ರಿಯೆಯನ್ನು ನುಗ್ಗೇಹಳ್ಳಿ ಹೋಬಳಿ ಕೇಂದ್ರದಲ್ಲಿ ಸೋಮವಾರದಿಂದ ಪ್ರಾರಂಭಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ಮಂಜುನಾಥ್ ತಿಳಿಸಿದರು.
ನುಗ್ಗೇಹಳ್ಳಿ ಎಪಿಎಂಸಿ ಆವರಣದ ಮಳಿಗೆಯಲ್ಲಿ ರಾಗಿ ಖರೀದಿಗೆ ಚಾಲನೆ ನೀಡಿ ಮಾತನಾಡಿದರು. ರಾಗಿ ಖರೀದಿಗೆ ನೊಂದಣಿ ಮಾಡಿಸಿರುವ ರೈತರೇ ನೇರವಾಗಿ ಸರದಿ ಸಾಲಿನಲ್ಲಿ ಖರೀದಿ ಕೇಂದ್ರಕ್ಕೆ ಗುಣಮಟ್ಟದ ರಾಗಿ ತರಬೇಕು. ಹಂತ ಹಂತವಾಗಿ ಎಲ್ಲ ರೈತರಿಂದ ಕ್ವಿಂಟಾಲ್‌ಗೆ 4888 ರೂ. ಖರೀದಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಿರಂಜೀವಿ, ರಾಂಪುರ ಪ್ರಕಾಶ್, ಗುರು, ಚಿಕ್ಕೆಗೌಡ, ದುಗ್ಗೆನಹಳ್ಳಿ ಸಂತೋಷ್, ಹೊಸಳ್ಳಿ ಮಂಜುನಾಥ್, ಸಂತೇಶಿವರ ಉಮೇಶ್, ಮಾಡ್ಲಳ್ಳಿ ಸತೀಶ್, ಚಿಕ್ಕೋನಹಳ್ಳಿ ರಘು, ಇತರರು ಹಾಜರಿದ್ದರು.