ಹಾಸನ ನಗರದ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಟ್ಟಾಯ ಶಿವಕುಮಾರ್, ಟಿ.ಪಿ.ನಾಗರಾಜ್, ಲೀಲಾ ಧರ್ಮಪ್ಪ, ಎಚ್.ವಿ. ಹೇಮಂತ್ ಕುಮಾರ್, ಶೆಟ್ಟಿಹಳ್ಳಿ ಧರ್ಮ ಇತರರಿದ್ದರು.
- ಸದಸ್ಯತ್ವ ನೋಂದಣಿ ಅಭಿಯಾನ ಶುರು
- ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಗೆ ಬಲ ತುಂಬಲು ಕ್ರಮ
ಹಾಸನ: ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ಸಂಘಟನೆಗೆ ಮತ್ತಷ್ಟು ಬಲ ತುಂಬುವ ಉದ್ದೇಶದಿಂದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಲಾಯಿತು.
ನಗರದ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಹಾಸನ ತಾಲೂಕು ಘಟಕದ ಸಭೆಯಲ್ಲಿ ಸಂಘಟನೆಯ ವಿಸ್ತರಣೆ, ಧಾರ್ಮಿಕ ಕಾರ್ಯಕ್ರಮ ಹಾಗೂ ಸಮಾಜಮುಖಿ ಚಟುವಟಿಕೆಗಳ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾಸನ ತಾಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ರಾಷ್ಟ್ರೀಯ ಹಾಗೂ ರಾಜ್ಯಮಟ್ಟದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಸಂಘಟನಾತ್ಮಕ, ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದರ ನಿರ್ದೇಶನದಂತೆ ಗ್ರಾಮ ಹಾಗೂ ತಾಲೂಕು ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಾಯಿಸಬೇಕಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಮಹಿಳಾ ನಿರ್ದೇಶಕಿ ಅನುಸೂಯ ಕಲ್ಯಾಣಕುಮಾರ್, ಸುಶೀಲಾ ಪಾಲನೇತ್ರ, ಸವಿತಾ ಭೂಷಣ್ ಹಾಗೂ ಶೈಲಾ ಮದನ್ ಸೇರಿದಂತೆ ಸದಸ್ಯತ್ವ ಅಭಿಯಾನದಲ್ಲಿ ಹೆಚ್ಚು ಸದಸ್ಯರನ್ನು ನೋಂದಾಯಿಸಿದ ಮಹಿಳಾ ಪದಾಧಿಕಾರಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಬಾಳೆಹೊನ್ನೂರಿನ ರಂಭಾಪುರಿ ಮಠದ ಜಗದ್ಗುರುಗಳನ್ನು ಹಾಸನಕ್ಕೆ ಆಹ್ವಾನಿಸಿ ಲಿಂಗಪೂಜೆ, ಲಿಂಗಾಧಾರಣೆ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು. ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮತ್ತು ಬಸವ ತತ್ವಗಳ ಪ್ರಚಾರಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಅಭಿಪ್ರಾಯ ವ್ಯಕ್ತವಾಯಿತು.
ಸಭೆಯಲ್ಲಿ ತಾಲೂಕು ಸಮಿತಿಯ ಉಪಾಧ್ಯಕ್ಷ ಟಿ.ಪಿ.ನಾಗರಾಜ್, ಲೀಲಾ ಧರ್ಮಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ವಿ. ಹೇಮಂತ್ ಕುಮಾರ್, ಸಹಕಾರ್ಯದರ್ಶಿ ಶೆಟ್ಟಿಹಳ್ಳಿ ಧರ್ಮ, ಚಾಂದಿನಿ ಭೂಷಣ್, ಜಿಲ್ಲಾ ಉಪಾಧ್ಯಕ್ಷೆ ಗೀತಾ ಪುಟ್ಟಸ್ವಾಮಿ, ಜಿಲ್ಲಾ ನಿರ್ದೇಶಕ ಶೋಭನ್ ಬಾಬು, ಎಚ್.ಎನ್. ಶರತ್ ಭೂಷಣ್, ಎಚ್.ವಿಜಯ್ ಕುಮಾರ್, ತಾಲೂಕು ನಿರ್ದೇಶಕ ರಾಜಶೇಖರ್ ಮೂರ್ತಿ (ಪಾಪು), ಡಿ.ವಿ.ಮದನ್, ಮಯೂರಿ ಲೋಕೇಶ್, ಸಾವಿತ್ರಿ ವಿಜಯ್ ಕುಮಾರ್, ಸಂಪತ್ ಕುಮಾರ್, ಮಲ್ಲಿಗೆ ವಾಳು ಮೋಹನ್ ಕುಮಾರ್, ದೇವರಾಜ್, ಬಿ.ದಿವಾಕರ್ ಇತರರು ಇದ್ದರು.