ಜಿಲ್ಲೆಯಲ್ಲಿ ಆಲೂ ಬೆಳೆದಿರುವುದು
- ಆಲೂಗಡ್ಡೆ ಬೆಳೆ ಪುನಶ್ಚೇತನಕ್ಕರೆ ಕ್ರಮ
- ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಉತ್ತೇಜನ
- 3 ಲಕ್ಷ ಚೀಲ ಬಿತ್ತನೆ ಬೀಜ ಕೋಲ್ಡ್ ಸ್ಟೋರೆಜ್‌ಗಳಲ್ಲಿ ದಾಸ್ತಾನು
ಒಂದು ಕಾಲದಲ್ಲಿ ಹಾಸನ ಎಂದರೆ ಆಲೂಗಡ್ಡೆ, ಆಲೂಗಡ್ಡೆ ಎಂದರೆ ಹಾಸನ ಎನ್ನುವ ವಾತಿತ್ತು. ಆದರೆ ಅಂಗವಾರಿ ರೋಗದಿಂದ ಕೈಸುಟ್ಟುಕೊಂಡ ರೈತರು ಪರ್ಯಾಯ ಬೆಳೆಯತ್ತ ಮುಖ ವಾಡಿದ್ದರಿಂದ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಯುವರ ಸಂಖ್ಯೆ ಇಳಿಮುಖವಾಗುತ್ತಿದೆ. ಹಾಗಾಗಿ, ಆಲೂಗಡ್ಡೆ ಬೆಳೆಯ ಪುನಶ್ಚೇತನಗೊಳಿಸುವ ಪ್ರಯತ್ನಕ್ಕೆ ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ಕೈಹಾಕಿದೆ.
ಈಗಾಗಲೇ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಬೇಕಾದಷ್ಟು 3 ಲಕ್ಷ ಚೀಲ ಬಿತ್ತನೆ ಆಲೂಗಡ್ಡೆ ಪಂಜಾಬ್ ರಾಜ್ಯದಿಂದ ಬಂದಿದ್ದು, ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಕೋಲ್ಡ್ ಸ್ಟೋರೆಜ್‌ಗಳಲ್ಲಿ ದಾಸ್ತಾನು ಇಡಲಾಗಿದೆ. ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ರೈತರು ಮತ್ತು ವರ್ತಕರೊಂದಿಗೆ ಮೂರು ಸುತ್ತಿನ ಸಭೆ, ಸಂವಾದ ನಡೆಸುವ ಮೂಲಕ ರೈತರನ್ನು ಪುನಾ ಆಲೂಗಡ್ಡೆ ಬೆಳೆಯಲು ಉತ್ತೇಜಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಆಲೂಗಡ್ಡೆ ಬೆಳೆ ಪ್ರದೇಶವನ್ನು ರೈತರನ್ನು ಉತ್ತೇಜಿಸುವ ಮೂಲಕ 15 ಸಾವಿರ ಹೆಕ್ಟೇರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಆಲೂಗಡ್ಡೆ ಬೆಳೆಯನ್ನು ದಶಕಗಳ ಹಿಂದೆ ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಆದರೆ, ಅಂಗವಾರಿ ರೋಗದ ಕಾರಣದಿಂದ ಪ್ರಸ್ತುತ 5 ಸಾವಿರ ಹೆಕ್ಟೇರ್‌ಗೆ ಕುಸಿತ ಕಂಡಿದೆ. ಆಲೂಗಡ್ಡೆ ಬೆಳೆಯುತ್ತಿದ್ದ ರೈತರು ಜೋಳದ ಬೆಳೆಯತ್ತ ವಾಲಿದ್ದಾರೆ. ಕಳೆದ ವರ್ಷ ಜೋಳವೂ ಬಿಳಿಸುಳಿ ರೋಗಕ್ಕೆ ತುತ್ತಾಗಿದ್ದರಿಂದ, ರೈತರನ್ನು ಮತ್ತೆ ಆಲೂಗಡ್ಡೆ ಬೆಳೆಯಲು ಕರೆತರಲು ಸರ್ಕಾರವು ಸತತ ಪ್ರಯತ್ನ ನಡೆಸುತ್ತಿದೆ.
ಕಳೆದ ಎರಡು ತಿಂಗಳಿಂದಲೇ ಆಲೂಗಡ್ಡೆ ಬೆಳೆಯಲು ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮೇ ತಿಂಗಳಿನಲ್ಲಿ ಮುಂಗಾರು ಹಂಗಾಮು ಪ್ರಾರಂಭವಾಗುವುದರಿಂದ ಏಪ್ರಿಲ್ ತಿಂಗಳಿನಿಂದಲೇ ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆಯಿಂದ ಸಿದ್ಧತೆ ನಡೆದೆ. ಇನ್ನೇನು ಕೆಲ ದಿನಗಳಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳ ಸಮ್ಮುಖದಲ್ಲಿ ವರ್ತಕರು, ರೈತರೊಂದಿಗೆ ಸಭೆ ನಡೆಸಿ ಬಿತ್ತನೆ ಆಲೂಗಡ್ಡೆ ಬೆಲೆ ನಿಗದಿಗೊಳಿಸಲಾಗುತ್ತದೆ. ಅಲ್ಲದೇ ಮೇ ತಿಂಗಳ ಎರಡನೇ ವಾರದಿಂದ ಬಿತ್ತನೆ ಬೀಜದ ಖರೀದಿ ಕೂಡ ಪ್ರಾರಂಭವಾಗಲಿದೆ.
ಜಿಲ್ಲೆಯ ಆಲೂಗಡ್ಡೆಗೆ ವಿಶೇಷ ಮನ್ನಣೆ
ಜಿಲ್ಲೆಯಲ್ಲಿ ಬೆಳೆಯುವ ಆಲೂಗಡ್ಡೆ ಹೆಚ್ಚಿನ ಇಳುವರಿಯೊಂದಿಗೆ ಗಾತ್ರವೂ ಹೆಚ್ಚಾಗಿದ್ದರಿಂದ ಇಲ್ಲಿ ಬೆಳೆಯುವ ಆಲೂಗಡ್ಡೆಗೆ ವಿಶೇಷ ಮನ್ನಣೆಯೂ ಇತ್ತು. ಚಿಪ್ಸ್ ವಾರುಕಟ್ಟೆ ಹಾಗೂ ಇತರ ಕಂಪನಿಗಳು ಆಲೂಗಡ್ಡೆ ಖರೀದಿಸುತ್ತಿದ್ದವು. ಆದರೆ, ಬದಲಾದ ಹವಾವಾನ, ಅಂಗವಾರಿ ರೋಗದಿಂದಾಗಿ ಇಲ್ಲಿನ ರೈತರು ಆಲೂಗಡ್ಡೆ ಬೆಳೆಯಲು ಹಿಂದೇಟು ಹಾಕುವಂತಾಗಿದೆ.
ಆಲೂಗಡ್ಡೆ ಬಿತ್ತನೆಗೆ ಸೂಕ್ತ ಕಾಲ:
ಪ್ರಸ್ತುತ ಜಿಲ್ಲೆಯ ಕೆಲವು ಭಾಗಗಳಲ್ಲಿ 23 ಬಾರಿ ಮಳೆಯಾಗಿದ್ದರೂ ಭೂಮಿಯ ಉಷ್ಣಾಂಶ ಕಡಿಮೆಯಾಗಿಲ್ಲ. ಆದ್ದರಿಂದ ಇನ್ನು ಆಲೂಗಡ್ಡೆ ಬಿತ್ತನೆಗೆ ವಾತಾವರಣ ಇನ್ನೂ ಪೂರಕವಾಗಿಲ್ಲ. ಇನ್ನು 34 ಹದವಾದ ಮಳೆಯಾಗಿ ಭೂಮಿಯ ಉಷ್ಣಾಂಶ ಹಾಗೂ ವಾತಾವರಣದ ಉಷ್ಣಾಂಶ ಕಡಿಮೆಯಾಗಿ ಆರ್ದತೆ ಹೆಚ್ಚುವವರೆಗೂ ಆಲೂಗಡ್ಡೆ ಬಿತ್ತನೆ ವಾಡಬಾರದು. ಒಂದು ವೇಳೆ ರೈತರು ಭೂಮಿಯ ಉಷ್ಣಾಂಶ ಕಡಿಮೆಯಾಗದೆಯೇ ಆಲೂಗಡ್ಡೆ ಬಿತ್ತನೆ ವಾಡಿದರೆ ಆಲೂಗಡ್ಡೆ ಭೂಮಿಯಲ್ಲಿ ಕೊಳೆಯುವುದು, ಕರಗುವುದು ನಿಶ್ಚಿತ.
ಬಿತ್ತನೆಗೆ ಆಲೂಗಡ್ಡೆಯನ್ನು ಖರೀದಿಸುವಾಗ ಅವುಗಳನ್ನು ಉತ್ಪಾದಿಸಿದ ಪ್ರದೇಶದ ಹಾಗೂ ಉತ್ಪಾದಿಸಿದವರ ವಿವರಗಳನ್ನು ಪಡೆಯುವುದು ಹಾಗೂ ನಂಬಲರ್ಹ ಸಂಸ್ಥೆ, ಕಂಪನಿ, ವರ್ತಕರಿಂದ ಆಲೂಗಡ್ಡೆ ಖರೀದಿಸುವುದು. ಖರೀದಿಸುವಾಗ ಶೈತ್ಯಾಗಾರದಿಂದ ಹೊರತೆಗೆದು ಎಷ್ಟು ದಿನಗಳಾಗಿವೆ ಎಂದು ವರ್ತಕರಿಂದ ವಾಹಿತಿ ಪಡೆದು, ಬಿತ್ತನೆ ಗಡ್ಡೆಗಳನ್ನು ಖರೀದಿಸಿದ ನಂತರ ಕನಿಷ್ಟ 10 ದಿನಗಳ ಕಾಲ ನೆರಳಿನಲ್ಲಿ ಹರಡಿ ಹದಗೊಳಿಸಬೇಕು.
ಬಿತ್ತನೆಗೆ 24 ಗಂಟೆಗಳ ಮುಂಚಿತವಾಗಿ ಉತ್ತಮವಾಗಿ ಮೊಳಕೆ ಬಂದಿರುವ ಗಡ್ಡೆಗಳನ್ನು ಬೀಜೋಪಚಾರ ವಾಡಿ ಬಿತ್ತನೆಗೆ ಬಳಸಬೇಕು. ಖರೀದಿಸುವ ಸಂದರ್ಭದಲ್ಲಿ ಸಂಸ್ಥೆ, ಕಂಪನಿ ವರ್ತಕರಿಂದ ಕಡ್ಡಾಯವಾಗಿ ಆಲೂಗಡ್ಡೆ ಬಿತ್ತನೆ ಉದ್ದೇಶಕ್ಕೆಂದು ದೃಢೀಕೃತ ಬೀಜಗಳೆಂದು ಬಿಲ್‌ಗಳನ್ನು ಪಡೆಯುವುದು.
ಈಗಾಗಲೇ ಇಲಾಖೆ ವತಿಯಿಂದ ಹಾಸನದ ಶೈತ್ಯಾಗಾರಗಳಲ್ಲಿ ದಾಸ್ತಾನಾಗಿರುವ ಆಲೂಗಡ್ಡೆಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ನಂತರದ ದಿವಸಗಳಲ್ಲಿ ಹೊರಗಡೆಯಿಂದ ಬರುವ ಆಲೂಗಡ್ಡೆ ಗುಣಮಟ್ಟದಲ್ಲಿ ಬೀಜದ ಗುಣಮಟ್ಟಗಳನ್ನು ಖಾತ್ರಿಪಡಿಸಿಕೊಳ್ಳುವುದು ಹಾಗೂ ಈ ಬಗ್ಗೆ ಇಲಾಖೆಗೆ ವಾಹಿತಿ ನೀಡುವುದು. ನಂತರವೇ ವಾರಾಟ ವಾಡಲು ಕ್ರಮವಹಿಸುವುದು.
ಜೋಳಕ್ಕೆ ಪರ್ಯಾಯ ಬೆಳೆಯತ್ತ ಚಿತ್ತ:
ಜಿಲ್ಲೆಯಲ್ಲಿ ಪ್ರಸ್ತುತ ಹೆಚ್ಚಾಗಿ ಜೋಳವನ್ನು ಬೆಳೆಯಲಾಗುತ್ತಿದೆ. ಆದರೆ, ಕಳೆದ ಬಾರಿ ರೋಗ ಕಾಣಿಸಿಕೊಂಡಿದ್ದರಿಂದ ಹೆಚ್ಚಿನ ಪ್ರವಾಣದ ರೈತರು ನಷ್ಟ ಹೊಂದಿದ್ದರು. ಆದ್ದರಿಂದ ಕಷಿ ಇಲಾಖೆ ಅಧಿಕಾರಿಗಳು ಜೋಳದ ಬದಲು ಪರ್ಯಾಯ ಬೆಳೆಯತ್ತ ಗಮನಹರಿಸುವಂತೆ ಸಲಹೆ ನೀಡಿದ್ದಾರೆ. ಆದ್ದರಿಂದ ಈ ಬಾರಿ ರೈತರು ಮುಸುಕಿನ ಜೋಳದ ಬದಲಾಗಿ ಆಲೂಗಡ್ಡೆಯನ್ನು ಬೆಳೆಯಲು ಆಸಕ್ತಿ ತೋರಿದಂತೆ ಕಾಣುತ್ತಿದೆ.
ಬಿತ್ತನೆ ಆಲೂಗಡ್ಡೆ ದಾಸ್ತಾನು, ಬೀಜೋಪಚಾರದ ಬಗ್ಗೆ ತೋಟಗಾರಿಕೆ ಇಲಾಖೆಯಿಂದ ವರ್ತಕರಿಗೆ ಈಗಾಗಲೇ ತರಬೇತಿ ನೀಡಿ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಗುಣಮಟ್ಟದ ಬಿತ್ತನೆ ಬೀಜದ ಆಯ್ಕೆ, ಔಷಧ, ರಸಗೊಬ್ಬರ ಪೂರೈಕೆ ಬಗ್ಗೆಯೂ ವರ್ತಕರಿಗೆ ಸೂಚನೆ ನೀಡಲಾಗಿದೆ.
ಈ ರ್ಷ ಆಲೂಗಡ್ಡೆ ಬೆಳೆಯನ್ನು ಉತ್ತೇಜಿಸುವ ದಷ್ಟಿಯಿಂದ ಜಿಲ್ಲಾಧಿಕಾರಿ ನೇತತ್ವದಲ್ಲಿ ಸಭೆ ನಡೆಸಿ, ರೈತರು ವರ್ತಕರೊಂದಿಗೆ ಚರ್ಚಿಸಲಾಗಿದೆ. ಈಗಾಗಲೇ 3 ಲಕ್ಷ ಚೀಲ ಬಿತ್ತನೆ ಆಲೂಗಡ್ಡೆಯನ್ನು ತರಿಸಿಕೊಂಡು ದಾಸ್ತಾನು ಮಾಡಲಾಗಿದೆ.
ಜಂಟಿ ನಿರ್ದೇಶಕ, ತೋಟಗಾರಿಕೆ ಇಲಾಖೆ