ಆಲೂರು ತಾಲೂಕಿನ ಕೆಂಚಮ್ಮ ಹೊಸಕೋಟೆಯ ಹೋಬಳಿಯ ಹಳ್ಳಿಯೂರು, ನವಿನಹಳ್ಳಿ ಗ್ರಾಮದಲ್ಲಿ ದಂಡಿನ ಮಾರಮ್ಮನವರ 2ನೇ ವರ್ಷದ ಜಾತ್ರಾ ಮಹೋತ್ಸವವು ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. 
ಹಾಸನ

ದಂಡಿನ ಮಾರಮ್ಮ ಜಾತ್ರೋತ್ಸವ ಸಂಭ್ರಮ

ಆಲೂರು: ತಾಲೂಕಿನ ಕೆಂಚಮ್ಮ ಹೊಸಕೋಟೆ ಹೋಬಳಿಯ ಹಳ್ಳಿಯೂರು, ನವಿನಹಳ್ಳಿ ಗ್ರಾಮದಲ್ಲಿ ದಂಡಿನ ಮಾರಮ್ಮನವರ 2ನೇ ವರ್ಷದ ಜಾತ್ರಾ ಮಹೋತ್ಸವವು ಸೋಮವಾರ ಮತ್ತು ಮಂಗಳವಾರ ಸಂಭ್ರಮದಿಂದ ಜರುಗಿತು.
ಮೇ 25ರ ಬೆಳಗ್ಗೆ ಶ್ರೀ ದಂಡಿನ ಮಾರಮ್ಮನವರಿಗೆ ಬಲಿಪೂಜೆ, ದೃಷ್ಟಿ ಪೂಜೆ, ಹೋಮ ಹಾಗೂ ಅಡ್ಡೆ ಮೆರವಣಿಗೆ ನಡೆದವು. ಮೇ 26ರ ಮಂಗಳವಾರ ಬೆಳಗ್ಗೆ 4.30 ಕ್ಕೆ ಗಂಗೆಪೂಜೆ ನಂತರ ಕೆಂಡೋತ್ಸವ ನಡೆಯಿತು. ನಂತರ ಅಮ್ಮನವರಿಗೆ ಬಲಿ ಪ್ರಧಾನ ಹರಕೆ ನೆರವೇರಿದವು. ಈ ಸಂದರ್ಭದಲ್ಲಿ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು.