ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ಒಕ್ಕಲಿಗ ಮುಖಂಡರು ಕೆಂಪೇಗೌಡ ವೃತ್ತದಲ್ಲಿ ಕೆಂಪೇಗೌಡರ ಪ್ರತಿಮೆಗೆ ನಮಿಸಿದರು. ಕೋಗಿಲಮನೆ ಕುಮಾರ್, ಚಂದ್ರೇಗೌಡ ಇತರರು ಇದ್ದರು. 
ಹಾಸನ

ಜನಪರ ಆಡಳಿತದಿಂದ ಇತಿಹಾಸ ನಿರ್ಮಾಣ

ಪ್ರಮುಖ ಮುಖ್ಯಾಂಶಗಳು

  • popular governance
ಬೇಲೂರು: ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ಒಕ್ಕಲಿಗ ಸಮಾಜದ ಮುಖಂಡರು ಕೆಂಪೇಗೌಡ ವೃತ್ತದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಹಾಗೂ ಯಗಚಿ ಸೇತುವೆ ಸಮೀಪವಿರುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪ್ರತಿಮೆಗೆ ಶನಿವಾರ ಪುಷ್ಪಹಾರದ ಮೂಲಕ ಗೌರವ ಸಲ್ಲಿಸಿದರು.
ಕರವೇ(ನಾರಾಯಣಗೌಡ)ಬಣದ ತಾಲೂಕು ಗೌರವಾಧ್ಯಕ್ಷ ಹಾಗೂ ಒಕ್ಕಲಿಗ ಮುಖಂಡ ಕೋಗಿಲಮನೆ ಕುಮಾರ್ ಮಾತನಾಡಿ, ಬೆಂಗಳೂರಿನ ನಿರ್ಮಾತೃ, ಅಪ್ರತಿಮ ಆಡಳಿತಗಾರ ಕೆಂಪೇಗೌಡರು ನೀಡಿದ ಕೊಡುಗೆಗಳನ್ನು ಸ್ಮರಿಸುವಂತಹ ಪವಿತ್ರ ದಿನವಾಗಿದೆ. ಕೆಂಪೇಗೌಡರು ಜನಪರ ಆಡಳಿತದಿಂದ ಇತಿಹಾಸ ನಿರ್ಮಿಸಿದವರು. ಬೆಂಗಳೂರನ್ನು ಸುಂದರ ನಗರವಾಗಿ ನಿರ್ಮಿಸದೆ ಭವಿಷ್ಯದ ಅಗತ್ಯತೆ ಅರಿತು ಯೋಜನೆ ರೂಪಿಸಿ, ವೃತ್ತಿಗನುಗುಣವಾಗಿ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿ ವ್ಯಾಪಾರ ವಹಿವಾಟಿಗೆ ಉತ್ತೇಜನ ನೀಡಿದ್ದು ಜನರ ಆರ್ಥಿಕ ಪ್ರಗತಿಗೆ ಆಧಾರವಾಗಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ ಮಾತನಾಡಿ, ನಾಡು ಕಂಡ ಧೀಮಂತ ನಾಯಕರು ನಾಡಪ್ರಭು ಕೆಂಪೇಗೌಡರು. ಅವರು ಬೆಂಗಳೂರನ್ನು ವಿಶ್ವಕ್ಕೆ ಪರಿಚಯಿಸಿದವರು ಎಂದರು.
ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್, ಮಾಜಿ ಅಧ್ಯಕ್ಷ ಅಶೋಕ್, ಒಕ್ಕಲಿಗ ಸಮಾಜದ ಕೆಂಪೇಗೌಡ ಯುವ ವೇದಿಕೆ ಅಧ್ಯಕ್ಷ ಬಸವರಾಜು, ಕಸಾಪ ಅಧ್ಯಕ್ಷ ಮಂಜೇಗೌಡ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಪೈಂಟರ್ ರವಿ, ಗ್ರಾಪಂ ಮಾಜಿ ಅಧ್ಯಕ್ಷರಾದ ಶಾಂತಕುಮಾರ್, ಮುಖಂಡರಾದ ಆರ್.ಎಸ್.ಮಹೇಶ್, ಲೋಕೇಶ್, ಮೀಸೆ ವಸಂತಕುಮಾರ್, ಅಣ್ಣೇಗೌಡ, ಚಂದ್ರು, ಮೋಹನ್, ಸಂತೋಷ್, ಸುರೇಶ್, ಕೃಷ್ಣ, ಹುಣಸೆಕೆರೆ ರಮೇಶ್ ಸೇರಿದಂತೆ ಇತರರಿದ್ದರು.