ಅಕೌಂಟೆಂಟ್ ಜನರಲ್ ಕಚೇರಿ ಬೆಂಗಳೂರು ಹಾಗೂ ಖಜಾನೆ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಹಾಸನ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಿಂಚಣಿ ಅದಾಲತ್, ಸಾಮಾನ್ಯ ಭವಿಷ್ಯ ನಿಧಿ ಅದಾಲತ್ ಹಾಗೂ ಲೆಕ್ಕಪತ್ರ ಸಮಸ್ಯೆಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜೀವ್ ಕುಮಾರ್ ಸಿಂಗ್, ಸಚಿನ್ ಕೃಷ್ಣ ಕೌಶಿಕ್, ಎಂ.ನಾಗಜ್ಯೋತಿ , ಪುನೀತ್ ಕುಮಾರ್ ಇತರರು ಇದ್ದರು. 
ಹಾಸನ

ಪಿಂಚಣಿ ಹಣ ಪ್ರತಿ ತಿಂಗಳು ದೊರಕುವಂತೆ ಮಾಡಿ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಪಿಂಚಣಿ ಹಣ ಪ್ರತಿ ತಿಂಗಳು ದೊರಕುವಂತೆ ಮಾಡಿ
  • ಐಅ-ಅಖ ಅಕೌಂಟೆಂಟ್ ಜನರಲ್ ತಾಕೀತು ಜಾಗೃತಿ ಕಾರ್ಯಕ್ರಮ
ಹಾಸನ: ಪಿಂಚಣಿ ಹಣ ಪ್ರತಿ ತಿಂಗಳು ಸರಿಯಾಗಿ ದೊರಕಬೇಕು ಮತ್ತು ಪಿಂಚಣಿ ದೊರಕದೇ ಇರುವ ಜನರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಹಾಗೂ ಪಿಂಚಣಿ ಪಾವತಿ ಹಂತವನ್ನು ತಿಳಿಸಿಕೊಡಬೇಕು ಎಂದು ಭಾರತೀಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಸೇವೆಯ (ಇಂಡಿಯನ್ ಆಡಿಟ್ ಆ್ಯಂಡ್ ಅಕೌಂಟ್ಸ್ ಸರ್ವಿಸ್) ಅಕೌಂಟೆಂಟ್ ಜನರಲ್ ರಾಜೀವ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಅಕೌಂಟೆಂಟ್ ಜನರಲ್ ಕಚೇರಿ ಬೆಂಗಳೂರು ಹಾಗೂ ಖಜಾನೆ ಇಲಾಖೆ ಬೆಂಗಳೂರು ಸಹಯೋಗದಲ್ಲಿ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಪಿಂಚಣಿ ಅದಾಲತ್, ಸಾಮಾನ್ಯ ಭವಿಷ್ಯ ನಿಧಿ ಅದಾಲತ್ ಹಾಗೂ ಲೆಕ್ಕಪತ್ರ ಸಮಸ್ಯೆಗಳ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಜಿಲ್ಲೆಯ ಬ್ಯಾಂಕ್‌ಗಳು ಬದ್ಧತೆಯಿಂದ ಕೆಲಸ ಮಾಡುತ್ತಿವೆ ಹಾಗೂ ಎಲ್ಲ ಬ್ಯಾಂಕ್‌ಗಳ ವ್ಯವಸ್ಥಾಪಕರು ಒಳ್ಳೆಯ ಶೈಲಿಯಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ಎಲ್ಲ ಬ್ಯಾಂಕ್‌ಗಳು ಪಿಂಚಣಿ ಸಮಸ್ಯೆಗಳನ್ನು ಬಗೆಹರಿಸಿದರೆ, ಖಜಾನೆ ಅಧಿಕಾರಿಗಳು ತಕ್ಷಣ ಹಣ ಪಾವತಿ ಮಾಡುತ್ತಾರೆ ಹಾಗೂ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದರು.
ಡೆಪ್ಯುಟಿ ಅಕೌಂಟ್ ಜನರಲ್(ಪೆನ್ಶನ್) ಸಚಿನ್ ಕೃಷ್ಣ ಕೌಶಿಕ್, ಹಿರಿಯ ಲೆಕ್ಕಾಧಿಕಾರಿ ಎಂ.ನಾಗಜ್ಯೋತಿ , ಸಹಾಯಕ ಲೆಕ್ಕಾಧಿಕಾರಿ ಶ್ರೀಕಾಂತ್, ಸಹಾಯಕ ಲೆಕ್ಕಾಧಿಕಾರಿ ಪುನೀತ್ ಕುಮಾರ್ ಇತರರಿದ್ದರು. ಜಿಲ್ಲಾ ಖಜಾನೆಯ ಉಪನಿರ್ದೇಶಕ ವಿಜಯೇಂದ್ರ ಹಾಗೂ ವಿವಿಧ ಬ್ಯಾಂಕ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.