ಬೇಲೂರಿನಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಚಂದ್ರಪ್ರಭಾ ಉದ್ಘಾಟಿಸಿದರು 
ಹಾಸನ

ಉಚಿತ ತರಬೇತಿ ಶಿಬಿರ ಸದುಪಯೋಗವಾಗಲಿ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಬಿಕ್ಕೋಡು ಅಂಬೇಡ್ಕರ್ ವಸತಿ ಶಾಲೆ ಪ್ರಾಂಶುಪಾಲೆ ಚಂದ್ರಪ್ರಭಾ
  • ಗೆಂಡೆಹಳ್ಳಿ ರಸ್ತೆಯಲ್ಲಿರುವ ಎಕ್ಸಲೆಂಟ್ ಅಕಾಡೆಮಿ ಕೋಚಿಂಗ್ ಸೆಂಟರ್
ಬೇಲೂರು: ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಲು ಇಂತಹ ಉಚಿತ ತರಬೇತಿ ಶಿಬಿರಗಳು ಆಶಾಕಿರಣವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಬಿಕ್ಕೋಡು ಅಂಬೇಡ್ಕರ್ ವಸತಿ ಶಾಲೆ ಪ್ರಾಂಶುಪಾಲೆ ಚಂದ್ರಪ್ರಭಾ ಹೇಳಿದರು.
ವಸತಿ ಶಾಲೆಗಳ 6 ನೇ ತರಗತಿ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ಪಟ್ಟಣದ ಗೆಂಡೆಹಳ್ಳಿ ರಸ್ತೆಯಲ್ಲಿರುವ ಎಕ್ಸಲೆಂಟ್ ಅಕಾಡೆಮಿ ಕೋಚಿಂಗ್ ಸೆಂಟರ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನವೋದಯ, ಮುರಾರ್ಜಿ ದೇಸಾಯಿ, ಅಂಬೇಡ್ಕರ್, ಇಂದಿರಾಗಾಂಧಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಪರೀಕ್ಷೆಗಳಿಗೆ ಸರಿಯಾದ ರೀತಿ ತಯಾರಾಗಬೇಕು. ದಿನನಿತ್ಯ ಪುಸ್ತಕ ಹಿಡಿದು ಶ್ರದ್ಧೆಯಿಂದ ಓದಿದಾಗ ಮಾತ್ರ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಲು ಸಾಧ್ಯ ಎಂದು ತಿಳಿಸಿದರು.
ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲೆ ಹೇಮಾವತಿ ಮಾತನಾಡಿ, ವಿದ್ಯಾರ್ಥಿಗಳು ವಸತಿ ಸಾಲೆಗೆ ಪ್ರವೇಶಕ್ಕೆ ಉತ್ತಮವಾಗಿ ಪರೀಕ್ಷೆ ಬರೆಯಬೇಕು. ವಸತಿ ಶಾಲೆಗೆ ಆಯ್ಕೆಯಾದ ನಂತರ ವಸತಿ ಶಾಲೆಗಳಲ್ಲಿ ಸಿಗುವಂತಹ ಉಚಿತ ಶಿಕ್ಷಣ ಹಾಗೂ ಮೂಲಸೌಕರ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಪರೀಕ್ಷೆಗೆ ಮುಂದಾಗುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಎಕ್ಸಲೆಂಟ್ ಅಕಾಡೆಮಿ ಕೋಚಿಂಗ್ ಸೆಂಟರ್ ಮುಖ್ಯಸ್ಥ ಹರೀಶ್ ಮಾತನಾಡಿದರು. ತರಬೇತಿ ಶಿಕ್ಷಕರಾದ ಶಾಂತಕುಮಾರ್, ಬಸವರಾಜ್, ವಿನಯ ಕುಮಾರ್ ಇತರರಿದ್ದರು.