ಶ್ರೀ ಚನ್ನಕೇಶವಸ್ವಾಮಿ ಜಾತ್ರ ಮಹೋತ್ಸವದ ಅಂಗವಾಗಿ ಬುಧವಾರ ರಾತ್ರಿ ಚಂದ್ರ ಮಂಡಲಾರೋಹಣೋತ್ಸವವನ್ನು ನೆರವೇರಿಸಲಾಯಿತು. 
ಹಾಸನ

ಚಂದ್ರ ಮಂಡಲಾರೋಹಣೋತ್ಸವ

ಬೇಲೂರು: ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ 3ನೇ ದಿನದಂದು ಚಂದ್ರ ಮಂಡಲಾರೋಹಣೋತ್ಸವವು ಭಕ್ತರ ಸಮ್ಮುಖದಲ್ಲಿ ಬುಧವಾರ ರಾತ್ರಿ ಸಡಗರದಿಂದ ನೆರವೇರಿತು.
ಈ ವಿಶೇಷ ಚಂದ್ರ ಮಂಡಲಾರೋಹಣೋತ್ಸವದ ಅಂಗವಾಗಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಭಕ್ತರು ದೇವರ ದರ್ಶನ ಪಡೆದರು. ನಂತರ ಉತ್ಸವಮೂರ್ತಿಯನ್ನು ಅಡ್ಡೆಯ ಚಂದ್ರ ಮಂಡಲದಲ್ಲಿ ಪ್ರತಿಷ್ಠಾಪಿಸಿ ದೇಗುಲದ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ಹಾಗೂ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ಚಂದ್ರ ಮಂಡಲವನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ, ವಿಶೇಷ ಆರತಿ ಹಾಗೂ ಮಂಗಳವಾದ್ಯಗಳೊಂದಿಗೆ ದೇವಾಲಯದ ಅಷ್ಟ ಬೀದಿಗಳಲ್ಲಿ ಭಕ್ತರ ಸಮ್ಮುಖದಲ್ಲಿ ಮೆರವಣಿಗೆ ನೆರವೇರಿತು. ಇದೇ ಸಂದರ್ಭದಲ್ಲಿ ನೂರಾರು ಭಕ್ತರು, ಅಡ್ಡೆಗಾರರು ಪಾಲ್ಗೊಂಡಿದ್ದರು.