ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿಯಾಗಿ ಬೈಕ್ ವೀಲಿಂಗ್ ಮಾಡಲು ಮುಂದಾದ ಯುವಕರನ್ನು ತಡೆದು ಸ್ಥಳೀಯರು ತರಾಟೆಗೆ ತೆಗೆದು ಕೊಂಡಿರುವುದು.
- ವೆಂಕಟಿಪೇಟೆ ಸಮೀಪ ರಸ್ತೆಯಲ್ಲಿ ದುಸ್ಸಾಹಸ
ತಾಲೂಕಿನ ಅರೇಹಳ್ಳಿ ಪಟ್ಟಣದ ಹೊರವಲಯದ ವೆಂಕಟಿಪೇಟೆ ಸಮೀಪ ರಸ್ತೆಯಲ್ಲಿ ಬೈಕ್ ವೀಲಿಂಗ್ ಮುಡುತ್ತಿದ್ದ ಯುವಕರನ್ನು ಸ್ಥಳೀಯರು, ವಾಹನ ಸವಾರರು ತರಾಟೆಗೆ ತೆಗೆದುಕೊಂಡರು.
ಮೂಲತಃ ಹಾಸನ ನಗರದವರೆನ್ನಲಾದ ಆರು ಜನ ಯುವಕರು ಮೂರು ಬೈಕ್‌ಗಳಲ್ಲಿ ಮಂಗಳವಾರ ಬೆಳಗ್ಗೆ ವೆಂಕಟಿಪೇಟೆ ಸಮೀಪದ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ವೀಲಿಂಗ್ ಮಾಡುರತ್ತ ಇತರ ವಾಹನಗಳ ಸಂಚಾರಕ್ಕೂ ಅಡಚಣೆ ಉಂಟುಮಾಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಎದುರಿನಿಂದ ಬರುತ್ತಿದ್ದ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆಯುವ ಹಂತಕ್ಕೂ ತಲುಪಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಅಪಾಘಾತ ತಪ್ಪಿದಂತ್ತಾಗಿದೆ. ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಹಾಗೂ ವಾಹನ ಸವಾರರು, ಬೈಕ್ ಸವಾರರನ್ನು ತಕ್ಷಣ ಅಡ್ಡಗಟ್ಟಿ, ಸಾರ್ವಜನಿಕ ರಸ್ತೆಯಲ್ಲಿ ಇಂತಹ ಅಪಾಯಕಾರಿ ಸಾಹಸಗಳಿಗೆ ಮುಂದಾಗದಂತೆ ಬುದ್ಧಿವಾದ ಹೇಳಿದ್ದಾರೆ.
ತಮ್ಮ ಜೀವದ ತೆಗೆ ಇತರರ ಜೀವಕ್ಕೂ ಅಪಾಯ ಉಂಟುಮಾಡುವ ಇಂತಹ ಕೃತ್ಯಗಳನ್ನು ಮರುಕಳಿಸದಂತೆ ಎಚ್ಚರಿಕೆ ನೀಡಿ ಯುವಕರನ್ನು ಬೈದು ಕಳುಹಿಸಿದ್ದಾರೆ. ಪೊಲೀಸರು ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.