ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವದ ನಂತರ ಸಿಂಹವಾಹನದ ಮೇಲೆ ದೇವರ ಮೂರ್ತಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು.
- ಶ್ರೀಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ
- ಅಷ್ಟ ಬೀದಿಗಳಲ್ಲಿ ಮೆರವಣಿಗೆ
ಬೇಲೂರು: ಶ್ರೀಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವದ ನಂತರದ 3ನೇ ದಿನ ಸಿಂಹವಾಹನೋತ್ಸವ ಯಶಸ್ವಿಯಾಗಿ ಶುಕ್ರವಾರ ರಾತ್ರಿ ನೆರವೇರಿತು.
ಸಿಂಹವಾಹನೋತ್ಸವವನ್ನು ಶಿಕ್ಷಣ ಇಲಾಖೆಯ ಅಧಿಕಾರಿ ಮತ್ತು ಶಿಕ್ಷಕರು ಮತ್ತು ಸಿಬ್ಬಂದಿ ನೇತೃತ್ವದ ಸೇವಾರ್ಥದೊಂದಿಗೆ ನೆರವೇರಿತು. ಇದಕ್ಕೂ ಮೊದಲು ಅರ್ಚಕರು ಎಂದಿನಂತೆ ಉತ್ಸವ ಸಾಗುವ ಮೊದಲು ದೇವಸ್ಥಾನದಲ್ಲಿ ಶ್ರೀ ಚನ್ನಕೇಶವಸ್ವಾಮಿ ಮೂರ್ತಿ ಹಾಗೂ ದೇವರ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ವಿದ್ಯುತ್ ದೀಪಗಳು ಹಾಗೂ ವಿವಿಧ ಪುಷ್ಪಗಳಿಂದ ಶೃಂಗರಿಸಿದ ಭವ್ಯ ಮಂಟಪದಲ್ಲಿ ಶುಕ್ರವಾರ ರಾತ್ರಿ ಉತ್ಸವ ಮೂರ್ತಿಯನ್ನು ಸಿಂಹವಾಹನದ ಮೇಲೆ ಪ್ರತಿಷ್ಠಾಪಿಸಿ ಮಂಗಳ ವಾದ್ಯದ ಜತೆಗೆ ಉತ್ಸವ ಮೂರ್ತಿಯನ್ನು ದೇಗುಲದ ಅಷ್ಟ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಸಿಂಹವಾಹನೋತ್ಸವದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಸಾಂಪ್ರದಾಯಿಕ ಸಮವಸ್ತ್ರ ತೊಟ್ಟು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಇಒ ಯೋಗೇಶ್, ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ, ಮಾಜಿ ಧರ್ಮದರ್ಶಿ ಕೇಶವಮೂರ್ತಿ, ಶಿಕ್ಷಕರಾದ ಮಂಜುನಾಥ್, ಆನಂದ್, ಗಿರೀಶ್ ಸೇರಿದಂತೆ ಅಡ್ಡಗಾರರಿದ್ದರು.