ಆಲೂರು ತಾಲೂಕಿನ ಧರ್ಮಪುರಿ ಗ್ರಾಮದಲ್ಲಿ ಆಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿಶೇಷ ವಾರ್ಷಿಕ ಶಿಬಿರದಲ್ಲಿ ಕೆ.ಟಿ ಹರೀಶ್ ಮಾತನಾಡಿದರು. ಪುರುಷೋತ್ತಮ್ ಜಿ, ಆನಂದ್, ಡಾ.ರಾಘವೇಂದ್ರ, ಶ್ರೀನಿವಾಸ್,ರಮೇಶ್ ಇತರರು ಇದ್ದರು.
- ಹಾಸನದ ಮೇರಾ ಯುವ ಭಾರತ್ ಕೇಂದ್ರದ ಜೀವನ ಕೌಶಲ ತರಬೇತುದಾರ ಕೆ.ಟಿ.ಹರೀಶ್ ಅಭಿಪ್ರಾಯ
ಆಲೂರು: ಪ್ರತಿಯೊಬ್ಬರೂ ತಮ್ಮಲ್ಲಿರುವ ದೌರ್ಬಲ್ಯಗಳನ್ನು ಗುರುತಿಸಿ ಅದನ್ನು ಸಾಮರ್ಥ್ಯಗಳನ್ನಾಗಿ ಪರಿವರ್ತಿಸಿಕೊಂಡಾಗ ಬದುಕಿನ ಹಾದಿ ಸುಗಮವಾಗುತ್ತದೆ ಎಂದು ಹಾಸನದ ಮೇರಾ ಯುವ ಭಾರತ್ ಕೇಂದ್ರದ ಜೀವನ ಕೌಶಲ ತರಬೇತುದಾರ ಕೆ.ಟಿ.ಹರೀಶ್ ಹೇಳಿದರು.
ತಾಲೂಕಿನ ಧರ್ಮಪುರಿ ಗ್ರಾಮದಲ್ಲಿ ಆಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಆಯೋಜಿಸಿರುವ ವಿಶೇಷ ವಾರ್ಷಿಕ ಶಿಬಿರದಲ್ಲಿ ಜೀವನ ಕೌಶಲ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜೀವನ ಕೌಶಲಗಳು ಬಹಳ ಮುಖ್ಯವಾಗಿದ್ದು, ಇವುಗಳಿಂದ ವ್ಯಕ್ತಿತ್ವ ವಿಕಸನವಾಗುವುದರ ಜತೆಗೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು. ಸ್ವಯಂ ಅರಿವು, ಭಾವನಾತ್ಮಕ ಕೌಶಲ, ತಂಡ ಕಾರ್ಯ, ಸಮಸ್ಯೆ ಪರಿಹಾರ ಮೊದಲಾದ ಜೀವನ ಕೌಶಲಗಳನ್ನು ಚಟುವಟಿಕೆಗಳ ಮೂಲಕ ವಿವರಿಸಿದರು.
ಈ ಸಂದರ್ಭದಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಧರ್ಮಪುರಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗಿಡ ನೆಟ್ಟು, ನೀರನ್ನು ಹಾಕಿದರು.
ವೇದಿಕೆಯ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ಜಾನುವಾರುಗಳ ಉಚಿತ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಆಲೂರು ಪಶು ಆಸ್ಪತ್ರೆಯ ಹಿರಿಯ ಪಶು ವೈದ್ಯಾಧಿಕಾರಿ ಡಾ.ಹರ್ಷಿತಾ, ಡಾ.ಅನಿಲ್ ಕುಮಾರ್, ಪಶು ವೈದ್ಯಕೀಯ ಪರೀಕ್ಷಕ ಏಳುಮನೆ, ಸಹಾಯಕರಾದ ಮಹೇಶ್, ರಂಗಸ್ವಾಮಿ, ಪಶುಸಖಿ ರಮ್ಯಾ ಅವರು ಧರ್ಮಪುರಿ ಗ್ರಾಮದ ಜಾನುವಾರುಗಳನ್ನು ತಪಾಸಣೆ ನಡೆಸಿದರು.
ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನಪದ ಗಾಯಕರಾದ ಯೋಗೇಂದ್ರ ದುದ್ದ ಮತ್ತು ಬಳಗದವರಿಂದ ಜನಪದ ಗೀತಗಾಯನ ನಡೆಯಿತು. ಈ ಸಂದರ್ಭದಲ್ಲಿ ಜನಪದ ಹಾಡುಗಾರರಾದ ಯೋಗೇಶ್, ಗುರುಪ್ರಸಾದ್, ಶಶಿಧರ್ ಉಪಸ್ಥಿತರಿದ್ದರು. ಆನಂತರ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಪುರುಷೋತ್ತಮ್ ಜಿ, ಮೈ ಭಾರತ್ ಜಿಲ್ಲಾ ಸಂಯೋಜಕರಾದ ಆನಂದ್, ಶಿಬಿರಾಧಿಕಾರಿ ಡಾ.ರಾಘವೇಂದ್ರ, ಸಹ ಶಿಬಿರಾಧಿಕಾರಿ ಶ್ರೀನಿವಾಸ್, ಸಹ ಪ್ರಾಧ್ಯಾಪಕರಾದ ರಮೇಶ್ ಕೆ.ಎನ್, ಕಾಲೇಜು ಸಿಬ್ಬಂದಿ, ಧರ್ಮಪುರಿ ಗ್ರಾಮಸ್ಥರು ಹಾಗೂ ಎನ್ನೆಸ್ಸೆಸ್ ಸ್ವಯಂ ಸೇವಕರು ಇದ್ದರು.