ಹೊಳೆನರಸೀಪುರದ ಭಾರತೀಯ ಜೀವ ವಿಮಾ ನಿಗಮದ ಕಚೇರಿಯಲ್ಲಿ ಜರುಗಿದ ವಾರ್ಷಿಕ ಸಂಭ್ರಮಾಚರಣೆಯನ್ನು ಹಿರಿಯ ಶಾಖಾಧಿಕಾರಿ ಎನ್. ಶ್ರೀಧರ್ ಉದ್ಘಾಟಿಸಿದರು. ಉಪಶಾಖಾಧಿಕಾರಿ ಬಿ.ಆರ್. ಅರುಣ್ ಕುಮಾರ್, ಶಿವಪ್ರಕಾಶ್, ಅರವಿಂದ್, ನಾಗಪ್ರಸಾದ್, ಮಮತಾ, ವೀಣಾ, ಉದಯ ಲಕ್ಷ್ಮಿ, ರಮೇಶ್, ಚಂದ್ರಶೇಖರ್ ಇತರರು ಇದ್ದರು.
ಹೊಳೆನರಸೀಪುರ: ಪಾಲಿಸಿದಾರರ ಕುಟುಂಬಗಳ ಜೀವನಮಟ್ಟ ಸುಧಾರಣೆಗೆ ಭಾರತೀಯ ಜೀವ ವಿಮಾ ನಿಗಮದ ಕೊಡುಗೆ ಅಪಾರವಾದದ್ದು ಎಂದು ಹಿರಿಯ ಶಾಖಾಧಿಕಾರಿ ಎನ್. ಶ್ರೀಧರ್ ಹೇಳಿದರು. ಪಟ್ಟಣದ ಭಾರತೀಯ ಜೀವ ವಿಮಾ ನಿಗಮದ ಕಚೇರಿಯಲ್ಲಿ ಸೋಮವಾರ 36ನೇ ವರ್ಷದ ವಾರ್ಷಿಕ ಸಂಭ್ರಮಾಚರಣೆಯಲ್ಲಿ ಮಾತನಾಡಿದರು.
ಪಟ್ಟಣದ ಎಲ್‌ಐಸಿ ಶಾಖೆ 1990ರಲ್ಲಿ ಪ್ರಾರಂಭವಾಗಿ 36 ವರ್ಷಗಳು ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಉಪ ಶಾಖಾಧಿಕಾರಿ ಬಿ.ಆರ್. ಅರುಣ್ ಕುಮಾರ್, ಹಿರಿಯ ಅಭಿವೃದ್ಧಿ ಅಧಿಕಾರಿ ಶಿವಪ್ರಕಾಶ್, ನಾಗಪ್ರಸಾದ್, ಉನ್ನತ ಶ್ರೇಣಿ ಅಧಿಕಾರಿ ಮಮತಾ, ಲಿಯಾಪಿ ಪ್ರತಿನಿಧಿ ಒಕ್ಕೂಟದ ಅಧ್ಯಕ್ಷ ಕೆ. ರಮೇಶ್ ಮಾತನಾಡಿದರು. ಅಭಿವೃದ್ಧಿ ಅಧಿಕಾರಿಗಳಾದ ಟಿ.ಪಿ. ಅರವಿಂದ್, ಅಭಿಷೇಕ್, ಶ್ರೀಕಾಂತ್, ಮಹೇಶ್, ಸಿಬ್ಬಂದಿಗಳಾದ ವೀಣಾ, ಉದಯಲಕ್ಷ್ಮಿ, ಶಿವಕುಮಾರ್, ಮಹಾದೇವಯ್ಯ, ಉತ್ತಪ್ಪ ಸ್ವಾಮಿ, ಆನಂದ, ಸತ್ಯನಾರಾಯಣ ಹಾಗೂ ಪ್ರತಿನಿಧಿಗಳಾದ ರವೀಶ್, ಪಾಲಾಕ್ಷ, ಚಂದ್ರಶೇಖರ್, ಸೋಮಶೇಖರ್, ಕಾಂತರಾಜು, ದೇವರಾಜೇಗೌಡ, ವಿದ್ಯಾ ಮತ್ತಿತರರು ಉಪಸ್ಥಿತರಿದ್ದರು.