ಹೊಳೆನರಸೀಪುರದ ಎಲ್‌ಐಸಿ ಶಾಖೆ ಆಯೋಜಿಸಿದ್ದ ನಮ್ಮ ಶಾಖೆ ನಮ್ಮ ಹೆಮ್ಮೆ ಸಾಧಕರ ಸಮಾವೇಶದಲ್ಲಿ ಮೈಸೂರು ವಿಭಾಗದ ಹಿರಿಯ ವಿಭಾಗಾಧಿಕಾರಿ ಕೃಷ್ಣವೇಣಿ ಮಾತನಾಡಿದರು. ಜೀವನ್ ಕುಮಾರ್, ಶೀದರಿ ಅಜಿತ್ ಕಿರಣ್, ನಂದೀಶ್, ಅರುಣ್ ಕುಮಾರ್ ಇದ್ದರು. 
ಹಾಸನ

ದೇಶದ ಆರ್ಥಿಕತೆಗೆ ಎಲ್‌ಐಸಿ ಬೆನ್ನೆಲುಬು

ಪ್ರಮುಖ ಮುಖ್ಯಾಂಶಗಳು

  • ಹಿರಿಯ ವಿಭಾಗಾಧಿಕಾರಿ ಕೃಷ್ಣವೇಣಿ ಅಭಿಮತ
  • ನಮ್ಮ ಶಾಖೆ, ನಮ್ಮ ಹೆಮ್ಮೆ ಸಾಧಕರ ಸಮಾವೇಶ
ಹೊಳೆನರಸೀಪುರ: ದೇಶದ ಆರ್ಥಿಕತೆಗೆ ಭಾರತೀಯ ಜೀವ ವಿಮಾ ನಿಗಮ ಬೆನ್ನೆಲುಬಾಗಿ ನಿಂತರೆ ನಿಗಮದ ಬೆಳವಣಿಗೆಗೆ ಪ್ರತಿನಿಧಿಗಳು ಬೆನ್ನೆಲುಬಾಗಿದ್ದಾರೆ ಎಂದು ಎಲ್‌ಐಸಿ ಮೈಸೂರು ಹಿರಿಯ ವಿಭಾಗಾಧಿಕಾರಿ ಕೃಷ್ಣವೇಣಿ ಹೇಳಿದರು.
ಪಟ್ಟಣದ ಪಿಆರ್ ಕಲ್ಯಾಣ ಮಂಟಪದಲ್ಲಿ ಎಲ್‌ಐಸಿ ಶಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ನಮ್ಮ ಶಾಖೆ, ನಮ್ಮ ಹೆಮ್ಮೆ ಸಾಧಕರ ಸಮಾವೇಶದಲ್ಲಿ ಮಾತನಾಡಿ, ಮೈಸೂರು ವಿಭಾಗ ಮಟ್ಟದಲ್ಲಿ ಹೊಳೆನರಸೀಪುರ ಶಾಖೆ, ಉತ್ತಮ ಸಾಧನೆ ಮಾಡಿದೆ. ಈ ಸಾಧನೆಗೆ ಪ್ರತಿನಿಧಿಗಳೇ ಕಾರಣ ಎಂದು ಸಂತಸ ವ್ಯಕ್ತಪಡಿಸಿದರು.
ಮಾರ್ಚ್ ತಿಂಗಳ ಆರ್ಥಿಕ ವರ್ಷದಲ್ಲಿ ಶಾಖೆಯ ಗುರಿ ತಲುಪಲು ಎಲ್ಲ ಅಡ್ವೈಸರ್ಸ್‌ಗಳು ಉತ್ತಮ ವ್ಯವಹಾರ ನಡೆಸಬೇಕು ಎಂದು ತಿಳಿಸಿದರು.
ಪಟ್ಟಣದ ಎಲ್‌ಐಸಿ ಶಾಖೆಯಲ್ಲಿ ಉತ್ತಮ ವ್ಯವಹಾರ ಮಾಡಿದ ಅಭಿವೃದ್ಧಿ ಅಧಿಕಾರಿ ಹಾಗೂ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಮಾರ್ಕೆಟಿಂಗ್ ಮ್ಯಾನೇಜರ್ ಜೀವನ್ ಕುಮಾರ್, ಶಾಖಾ ವ್ಯವಸ್ಥಾಪಕ ಶೀದರಿ ಅಜಿತ್ ಕಿರಣ್, ಅರಕಲಗೂಡು ಶಾಖೆ ಬಿ.ಎಂ. ನಂದೀಶ್, ಉಪಶಾಖಾಧಿಕಾರಿ ಬಿ.ಆರ್.ಅರುಣ್ ಕುಮಾರ್ ಮಾತನಾಡಿದರು. ಅಧಿಕಾರಿಗಳಾದ ಉದಯಲಕ್ಷ್ಮೀ, ಮಮತಾ, ಸ್ವಾತಿ, ರವಣಯ್ಯ, ಗೌತಮ್, ರಂಗಸ್ವಾಮಿ ನಾಯ್ಕ ಇದ್ದರು.