ಬೇಲೂರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನವನ್ನು ಗಣ್ಯರು ಉದ್ಘಾಟಿಸಿದರು. ಬಿ.ಬಿ.ಶಿವರಾಜ್, ಜ್ಯೋತಿ, ಮಾ.ಶಿವಮೂರ್ತಿ, ಹಲ್ಮಿಡಿ ಚನ್ನೆಗೌಡ, ಶಿಕ್ಷಕ ನಾಗರಾಜ, ಕೇಬಲ್ ವಿಜಯಕುಮಾರ್, ಶಿಕ್ಷಕ ಸಂಪತ್ತು ಚೆನ್ನಕೇಶವೇಗೌಡ, ಕುಮಾರಸ್ವಾಮಿ, ಧರ್ಮಪ್ರಕೃತಿ ಇತರರಿದ್ದರು. 
ಹಾಸನ

ಹೋರಾಟಗಾರರ ಬಲಿದಾನದ ಮಹತ್ವ ಅರಿಯಲಿ

ಪ್ರಮುಖ ಮುಖ್ಯಾಂಶಗಳು

  • ಕಸಾಪ ತಾಲೂಕು ಅಧ್ಯಕ್ಷ ಮಾ.ನ.ಮಂಜೇಗೌಡ ಕಿವಿಮಾತು

ಬೇಲೂರು :

ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳ ಅಪ್ರತಿಮ ತ್ಯಾಗ, ಬಲಿದಾನ ಹಾಗೂ ಮಹನೀಯರ ಇತಿಹಾಸವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಮಾ.ನ.ಮಂಜೇಗೌಡ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನದಲ್ಲಿ ಮಾತನಾಡಿದರು.
ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಪ್ರತಿಯಾಗಿ ಬ್ರಿಟಿಷ್ ಆಡಳಿತದ ವಿರುದ್ಧ ಪ್ರತೀಕಾರ ಕೈಗೊಂಡ ಕ್ರಾಮತಿಕಾರಿ ಹೋರಾಟಗಾರರು ದೇಶಕ್ಕಾಗಿಜೀವನವನ್ನೇ ಮುಡಿಪಾಗಿಟ್ಟಿದ್ದರು. ಗಾಂಧಿ ಅವರ ಅಹಿಂಸಾತ್ಮಕ ಹೋರಾಟದಲ್ಲಿಯೂ ಲಕ್ಷಾಂತರ ಜನರು ಭಾಗವಹಿಸಿದ್ದರು. ಇಂತಹ ಮಹನೀಯರ ತ್ಯಾಗದ ಇತಿಹಾಸವನ್ನು ವಿದ್ಯಾರ್ಥಿಗಳು ತಿಳಿದು ಕೊಂಡಾಗ ಮಾತ್ರ ಸ್ವಾತಂತ್ರ್ಯ ದಿನಾಚರಣೆಗೆ ಅರ್ಥ ಸಿಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸೇವಾ ಸಂಘದ ನೂರ್ ಅಹಮದ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜ್, ಪುರಸಭೆ ಆರೋಗ್ಯಾಧಿಕಾರಿ ಜ್ಯೋತಿ, ಕಸಾಪ ಗೌರವಾಧ್ಯಕ್ಷ ಮಾ.ಶಿವಮೂರ್ತಿ, ಹಲ್ಮಿಡಿ ಚನ್ನೆಗೌಡ, ಶಿಕ್ಷಕ ನಾಗರಾಜ, ಕೇಬಲ್ ವಿಜಯಕುಮಾರ್, ಶಿಕ್ಷಕ ಸಂಪತ್ತು ಚೆನ್ನಕೇಶವೇಗೌಡ, ಕುಮಾರಸ್ವಾಮಿ, ಧರ್ಮಪ್ರಕೃತಿ ಇತರರಿದ್ದರು.