ಮೂರು ಕ್ಷೇತ್ರದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ತರಬೇತಿ ಕಾರ್ಯಗಾರದಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾಹಿತಿ ನೀಡಿದರು.
ಬೇಲೂರು : ಅರ್ಹ ಮತದಾರರು ಮತಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆಯಿಂದ ಮತಗಟ್ಟೆ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎಸ್.ಲತಾಕುಮಾರಿ ಹೇಳಿದರು.
ಪಟ್ಟಣದ ಶ್ರೀ ಶಿವಕುಮಾರಸ್ವಾಮೀಜಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಬೇಲೂರು ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
20 ವರ್ಷಗಳ ನಂತರ ಮತಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಪ್ರಥಮವಾಗಿ 1950 ರಲ್ಲಿ ಪರಿಷ್ಕರಣೆಯಾಗಿತ್ತು. ನಂತರದಲ್ಲಿ ಇಲ್ಲಿವರೆಗೂ 10 ಬಾರಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯಾಗಿದ್ದು, 2026 ರಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯಾಗುತ್ತಿದೆ. ಆದ್ದರಿಂದ ಕ್ಷೇತ್ರದಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆಗೆ ನೇಮಕವಾಗಿರುವ ಎಲ್ಲ ಇಆರ್‌ಒ, ಎಇಆರ್‌ಒ, ಬಿಎಲ್‌ಒ, ಬಿಎಲ್‌ಒ ಸೂಪರ್ ವೈಸರ್‌ಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಭಾಗಿಯಾಗಲಿದ್ದಾರೆ. ಮತದಾರರ ಪರಿಷ್ಕರಣೆ ಪ್ರತಿಬಾರಿ ನಡೆಯುತ್ತೆ ಇದರಲ್ಲಿ ಹೊಸ ಸೇರ್ಪಡೆ, ಮೃತರನ್ನು ಕೈಬಿಡುವುದು, ವರ್ಗಾವಣೆ ಆಗಿದ್ದರೆ ಅಂತವರನ್ನು ಪರಿಷ್ಕರಣೆ ಮಾಡಲಾಗುವುದು. ಮತದಾನವು ಸಂವಿಧಾನದ ಪ್ರಜಾಪ್ರಭುತ್ವದ ಕಾಯ್ದೆ ಪ್ರಕಾರ ನಡೆಯುತ್ತದೆ. ಆದರೆ ಎಸ್‌ಐಆರ್ ಅಂದ್ರೆ ಇಲ್ಲಿ ಕೆಲ ವ್ಯತ್ಯಾಸವಿದೆ. ಅಲ್ಲದೆ ಕೇಂದ್ರ ಚುನಾವಣಾ ಆಯೋಗದ ಆದೇಶದಂತೆ ಕರ್ನಾಟಕದಲ್ಲಿ ಈಗ ಮತದಾರರ ಪರಿಷ್ಕರಣೆ ನಡೆಯುತ್ತಿದೆ ಎಂದು ಹೇಳಿದರು.
ಇಲ್ಲಿನವರಿಗೆ ಈಗಾಗಲೇ ಎರಡು ತರಬೇತಿ ಕಾರ್ಯಗಾರವಾಗಿದೆ. ಆದ್ದರಿಂದ ನಿಯಮಾನುಸಾರ ಶಿಸ್ತುಬದ್ಧವಾಗಿ ಕೆಲಸ ಮಾಡಬೇಕಿದೆ. ಜೂ.30ರಿಂದ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನಿಡಲಿದ್ದಾರೆ.
ಬಿಎಲ್‌ಒಗಳು ನೀಡುವ ಅರ್ಜಿಯನ್ನು ಸಾರ್ವಜನಿಕರು ಇಟ್ಟುಕೊಳ್ಳಬೇಕು. ಕಾರಣ ಮತದಾರರ ಪಟ್ಟಿಯಲ್ಲಿ ಹೆಸರು ಬಾರದಿದ್ದಲ್ಲಿ ಮತದಾರರ ಹೆಸರನ್ನು ಸೇರಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭ ಬಿಎಲ್‌ಒ ಹಾಗೂ ಬಿಎಲ್‌ಇಗಳು ಜಿಲ್ಲಾಧಿಕಾರಿಗಳೊಂದಿಗೆ ಮಾಹಿತಿ ಪಡೆದು ಕೊಂಡರು.
ಅಪರ ಜಿಲ್ಲಾಧಿಕಾರಿ ಜಗಧೀಶ್, ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಅರಸೀಕೆರೆ ತಹಸೀಲ್ದಾರ್ ಸಂತೋಷ್, ತಾಪಂ ಇಒ ಸತೀಶ್ ಕುಮಾರ್, ಬಿಇಒ ಬಾಗ್ಯಮ್ಮಾ ಇತರರಿದ್ದರು.
ಚಿತ್ರ:18(ಬಿಎಲ್‌ಆರ್)2-ಪಟ್ಟಣದ ಶ್ರೀ ಶಿವಕುಮಾರಸ್ವಾಮೀಜಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕ್ಷೇತ್ರದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ತರಬೇತಿ ಕಾರ್ಯಗಾರವನ್ನು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಉದ್ಘಾಟಿಸಿದರು. ಜಗಧೀಶ್, ಶ್ರೀಧರ್ ಕಂಕನವಾಡಿ ಇತರರಿದ್ದರು.