ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಬಿ.ಎಸ್.ಆನಂದಕುಮಾರ್ ಅವರನ್ನು ತಾಲೂಕು ನೌಕರರ ಸಂಘದ ಪದಾಧಿಕಾರಿಗಳು ಅಭಿನಂದಿಸಿದರು. ಮಂಜುನಾಥ್, ಧರ್ಮಗೌಡ, ಸಂತೋಷ್, ಹೇಮಂತ್‌ಕುಮಾರ್, ವೀರಭದ್ರಪ್ಪ ಇದ್ದರು.
ಸರ್ಕಾರಿ ನೌಕರರ ತಾಲೂಕು ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿಕೆ
ಬೇಲೂರು: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಬಿ.ಎಸ್.ಆನಂದಕುಮಾರ್ ಅವರನ್ನು ಬೇಲೂರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಶನಿವಾರ ಅಭಿನಂದಿಸಲಾಯಿತು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಭಿನಂದನ ಸಮಾರಂಭದಲ್ಲಿ ಏರ್ಪಡಿಸಿದ್ದ ಅಭಿನಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ಸರ್ಕಾರಿ ನೌಕರರ ಸಂಘದಲ್ಲಿ ಬೇಲೂರು ತಾಲೂಕಿನವರಿಗೆ ರಾಜ್ಯ ಮಟ್ಟದ ಪ್ರತಿನಿಧಿತ್ವ ಸಿಕ್ಕಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ನೌಕರರ ಹಿತಾಸಕ್ತಿಯ ಪರವಾಗಿ ಬಿ.ಎನ್.ಆನಂದಕುಮಾರ್ ಅವರು ಸದಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಮಟ್ಟದಲ್ಲಿಯೂ ಅವರು ಜಿಲ್ಲೆ ಮತ್ತು ಬೇಲೂರು ಸಂಘಕ್ಕೆ ಗೌರವ ತಂದು ಕೊಡಲಿದ್ದಾರೆ ಎಂಬ ವಿಶ್ವಾಸವಿದ್ದು ನೌಕರರ ಹಿತಕ್ಕಾಗಿ ಇನ್ನೂ ಹೆಚ್ಚಿನ ಕೆಲಸ ಮಾಡಲಿ ಎಂದರು.
ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಗೌಡ ಮಾತನಾಡಿ, ಸರ್ಕಾರಿ ನೌಕರರ ಹಕ್ಕು ಹಾಗೂ ಅವರ ಹಿತವನ್ನು ಕಾಪಾಡಲು ಬಲವಾದ ನಾಯಕತ್ವ ಅತ್ಯಗತ್ಯವಿದ್ದು, ಇದಕ್ಕೆ ಬಿ.ಎನ್.ಆನಂದಕುಮಾರ್ ಸೂಕ್ತ ವ್ಯಕ್ತಿಯಾಗಿದ್ದಾರೆ. ಜತೆಗೆ ಅವರ ಸಂಯಮ, ಸಂಘಟನಾ ಶಕ್ತಿ ಹಾಗೂ ಸೇವಾ ಮನೋಭಾವ ರಾಜ್ಯ ಪರಿಷತ್ತಿನಲ್ಲೂ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ. ಬೇಲೂರು ತಾಲೂಕಿನ ಧ್ವನಿಯನ್ನು ರಾಜ್ಯ ಮಟ್ಟಕ್ಕೆ ತಲುಪಿಸುವಲ್ಲಿ ಅವರು ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಶ್ಲಾಘಿಸಿದರು.
ಸರ್ಕಾರಿ ನೌಕರರ ಸಂಘದ ಮುಖಂಡರಾದ ರವಿ, ಸಂತೋಷ್, ಹೇಮಂತ್ ಕುಮಾರ್, ವೀರಭದ್ರಪ್ಪ ಸೇರಿದಂತೆ ಇತರ ಪದಾಧಿಕಾರಿಗಳು ಮತ್ತು ನಿರ್ದೇಶಕರಿದ್ದರು.