ಮದ್ದೂರಲ್ಲಿ ನೂತನ ತಹಸೀಲ್ದಾರ್ ಡಾ. ಶಿವಕುಮಾರ ಬಿರಾದಾರ ಅವರನ್ನು ದಲಿತ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದಿಸಲಾಯಿತು. ಕೆ.ಟಿ.ಶಿವಕುಮಾರ್, ವೆಂಕಟಚಲಯ್ಯ, ರಾಚಯ್ಯ, ಪಿ.ಶಶಿಕುಮಾರ್, ಶಿವಣ್ಣ ಮತ್ತಿತರರು ಇದ್ದರು.
ಮದ್ದೂರು: ನೂತನ ತಹಸೀಲ್ದಾರ್ ಆಗಿ ಅಧಿಕಾರಿ ಸ್ವೀಕಾರ ಮಾಡಿದ ಡಾ. ಶಿವಕುಮಾರ ಬಿರಾದಾರ ಅವರನ್ನು ನಗರದ ತಾಲೂಕು ಕಚೇರಿಯಲ್ಲಿ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದಿಸಲಾಯಿತು.
ದಲಿತ ಮುಖಂಡ ಅತಗೂರು ವೆಂಕಟಾಚಲಯ್ಯ ಮಾತನಾಡಿ, ತಾಲೂಕಿಗೆ ಹೊಸದಾಗಿ ಬಂದಿರುವ ಡಾ.ಶಿವಕುಮಾರ ಬಿರಾದಾರ ಅವರು ಒಳ್ಳೆಯ ಕೆಲಸಗಾರರು. ಇವರುತಾಲೂಕಿಗೆ ಬಂದಿರುವುದು ಸಂತಸದ ವಿಷಯ. ತಾಲೂಕಿನಲ್ಲಿ ಹಲವಾರು ಸಮಸ್ಯೆಗಳಿದ್ದು ಅವುಗಳನ್ನ ಬಗೆಹರಿಸಲು ಗಮನ ಹರಿಸುವ ಮೂಲಕ ಜನಪರವಾಗಿ ಕೆಲಸ ಮಾಡಬೇಕು. ಉತ್ತಮವಾದ ಕೆಲಸ ನಿರ್ವಹಿಸಲು ನಮ್ಮ ಸಹಕಾರ ಇರುತ್ತದೆ ಎಂದು ತಿಳಿಸಿದರು.
ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಸಹ ಕಾರ್ಯದರ್ಶಿ ರಾಚಯ್ಯ, ಪುಟ್ಟಲಿಂಯ್ಯ, ಪ್ರಸನ್ನ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘದ ಅಧ್ಯಕ್ಷ ಶಿವಣ್ಣ, ಅಹಿಂದ ಸಂರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಪಿ.ಶಶಿ ಕುಮಾರ್, ಅಪ್ಪಾಜಿ, ಮೋಹನ್, ಶ್ರೀನಿವಾಸ ಶೆಟ್ಟಿ, ಮಲವರಾಜು, ದಾಕ್ಷಾಯಿಣಿ, ವೆಂಕಟೇಶ್, ಶಿವಕುಮಾರ್, ಆಶಿಷ್ ಪಾಷಾ, ಬಸವಚಾರಿ, ಗುರುಸಿದ್ದಯ್ಯ ಇದ್ದರು.