ಬಾಣಾವರ ಪಟ್ಟಣದ ಜಾವಗಲ್ ರಸ್ತೆಯಲ್ಲಿ ಸಮರ್ಥ ರೈತ ಮಿತ್ರ ಆಗ್ರೋ ಕೇಂದ್ರವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಅಭಿನವ ಮಲ್ಲಿಕಾರ್ಜುನ ಸ್ವಾಮಿ, ಎನ್.ಆರ್.ಸಂತೋಷ್, ಜಿವಿಟಿ, ಬಸವರಾಜ್, ಮುನಿಸ್ವಾಮಿಗೌಡ, ಚಂದನ್ ಇತರರಿದ್ದರು.
- ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್
- ಬಾಣಾವರ ಪಟ್ಟಣದ ಜಾವಗಲ್ ರಸ್ತೆ
ಅರಸೀಕೆರೆ: ರೈತನ ಬೆವರು ಭೂಮಿಗೆ ಬಿದ್ದರೆ ಮಾತ್ರ ನಮ್ಮ ಜೀವ ಹಾಗೂ ಜೀವನ ಸಾಧ್ಯ ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಅಭಿಪ್ರಾಯಪಟ್ಟರು.
ತಾಲೂಕಿನ ಬಾಣಾವರ ಪಟ್ಟಣದ ಜಾವಗಲ್ ರಸ್ತೆಯಲ್ಲಿ ಭಾನುವಾರ ಸಮರ್ಥ ರೈತ ಮಿತ್ರ ಆಗ್ರೋ ಏಜೆನ್ಸಿಯ ನೂತನ ಶಾಖೆ ಉದ್ಘಾಟಿಸಿ ಮಾತನಾಡಿ ಅವರು, ರೈತ ತಾನು ಬೆಳೆದ ಬೆಳೆಗಳನ್ನು ತಾನೇ ಮಾರಾಟ ಮಾಡಿ ಲಾಭ ಪಡೆಯುವ ಮೂಲಕ ಅಭಿವೃದ್ಧಿ ಹೊಂದಬೇಕು. ಇಲ್ಲದಿದ್ದರೆ ಲಾಭ ಮಧ್ಯವರ್ತಿಗಳ ಪಾಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಮ್ಮಡಿಹಳ್ಳಿ ಕುಪ್ಪೂರು ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ, ಸಮರ್ಥ ರೈತ ಮಿತ್ರ ಆಗ್ರೋ ಕೇಂದ್ರದ ಸ್ಥಾಪಕ ಚಂದನ್, ಜಿವಿಟಿ ಬಸವರಾಜ್, ಹಾಸನ ಕೃಷಿ ವಿದ್ಯಾಲಯದ ಡಾ.ಕೆ.ಎನ್.ಮುನಿಸ್ವಾಮಿ ಗೌಡ, ಬಾಣಾವರ ಗ್ರಾಮ ಪಂಚಾಯಿತಿ ಸದಸ್ಯ ಬಿ.ಆರ್.ಸುರೇಶ್, ಚಿಕ್ಕನಾಯಕನಹಳ್ಳಿ ಸಹಾಯಕ ಕೃಷಿ ಅಧಿಕಾರಿ ಸೋಮಶೇಖರ್, ಅರಸೀಕೆರೆ ತೋಗಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸೀಮಾ ಇತರರಿದ್ದರು.