ಹಾಸನ ನಗರದ ಹಾಸನ ಲಯನ್ಸ್ ಕ್ಲಬ್‌ನಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಾರತೀರಾಜಶೇಖರ್, ಎಚ್.ರಮೇಶ್, ಕಾರ್ಯದರ್ಶಿ ಸಿ.ಶಿವಸ್ವಾಮಿ, ಖಜಾಂಚಿ ಎಚ್.ಆರ್. ಚನ್ನೇಗೌಡ ಇತರರಿದ್ದರು. 
ಹಾಸನ

ಸಮಾಜ ಸೇವೆ ಜೀವನದ ಅವಿಭಾಜ್ಯ ಅಂಗವಾಗಲಿ

ಪ್ರಮುಖ ಮುಖ್ಯಾಂಶಗಳು

  • ಸಮಾಜ ಸೇವೆ ಜೀವನದ ಅವಿಭಾಜ್ಯ ಅಂಗವಾಗಲಿ
  • ವೈದ್ಯೆ ಭಾರತೀ ರಾಜಶೇಖರ್ ಸಲಹೆ
ಹಾಸನ: ಆಧುನಿಕ ವೇಗದ ಬದುಕಿನಲ್ಲಿ ಸೇವಾ ಮನೋಭಾವ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ವೈದ್ಯೆ ಭಾರತೀ ರಾಜಶೇಖರ್ ಸಲಹೆ ನೀಡಿದರು.
ನಗರದ ಹಾಸನ ಲಯನ್ಸ್ ಕ್ಲಬ್‌ನಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ದಾನ ಎಂದರೆ ಕೇವಲ ಹಣಕಾಸಿನ ವ್ಯವಹಾರವಲ್ಲ. ಅದು ಮೌಲ್ಯಾಧಾರಿತ ಜೀವನದ ಪ್ರತಿಬಿಂಬವಾಗಿರಬೇಕು. ಮನುಷ್ಯನ ಬಳಿಯಿರುವುದನ್ನು ಹಂಚಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ಅದು ಜ್ಞಾನವಾಗಲಿ, ಆಹಾರವಾಗಲಿ, ಆರ್ಥಿಕ ಸಹಾಯವಾಗಲಿ ಅಥವಾ ಒಬ್ಬರ ಮನಸ್ಸಿಗೆ ನೆಮ್ಮದಿ ನೀಡುವಂತಾಗಲಿ ಎಲ್ಲವೂ ಸಮಾಜ ನಿರ್ಮಾಣಕ್ಕೆ ಸಹಕಾರಿಯೇ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ರಮೇಶ್, ಕಾರ್ಯದರ್ಶಿ ಸಿ.ಶಿವಸ್ವಾಮಿ, ಖಜಾಂಚಿ ಎಚ್.ಆರ್.ಚನ್ನೇಗೌಡ, ಜಿಲ್ಲಾ ಸಂಪುಟ ಕಾರ್ಯದರ್ಶಿ ಎಚ್.ಆರ್.ಚಂದ್ರೇಗೌಡ, ವಲಯ ಅಧ್ಯಕ್ಷ ಎಚ್.ಕೆ.ನಾಗೇಶ್, ಮಾಲತಿ ಹೆಗ್ಗಡೆ ಇತರರಿದ್ದರು.