ರಫ್ತು ಪ್ರಚಾರದ ಕಾರ್ಯಾಗಾರ ಮತ್ತು ರಫ್ತು ಪ್ರಚಾರ ಮಿಷನ್, ರಫ್ತು ಕೇಂದ್ರ ಉಪಕ್ರಮವಾಗಿ ಜಿಲ್ಲೆ-ಎಫ್‌ಟಿಎ ಔಟ್ರೀಚ್ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಡಿಸಿ ಲತಾಕುಮಾರಿ, ಐಟಿಎಸ್ ಸಹಾಯಕ ಡಿಜಿಎಫ್‌ಟಿ ಕಚೇರಿಯ ನಿರ್ದೇಶಕರಾದ ಕೆ. ಆದರ್ಶ್, ವಿ.ಉಮೇಶ್ ಇತರರಿದ್ದರು.
- ಹೆಣ್ಣುಮಕ್ಕಳು ಆರ್ಥಿಕವಾಗಿ ಸಬಲೀಕರಣ ಹೊಂದಲಿ
- ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಅಭಿಪ್ರಾಯ
ಹೆಣ್ಣುಮಕ್ಕಳು ಯಾರ ಮೇಲು ಅವಲಂಬಿತರಾಗದೆ ಸ್ವ-ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಹೇಳಿದರು.
ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ, ಕರ್ನಾಟಕ ಅಧ್ಯಯನದ ಸಹಯೋಗದೊಂದಿಗೆ ರಫ್ತು ಪ್ರಚಾರ ಮಿಷನ್ (ಇಪಿಎಂ), ಟ್ರೇಡ್ ಕನೆಕ್ಟ್ ಇ-ಪ್ಲಾಟ್‌ಫಾರ್ಮ್, ಜಿಲ್ಲಾ ರಫ್ತು ಕೇಂದ್ರಗಳು, ಎಫ್‌ಟಿಎ ಔಟ್ರೀಚ್ ಪ್ರೋಗ್ರಾಂ *****(ಯುಕೆ, ಇಯು, ಓಮನ್, ಆಸ್ಟ್ರೇಲಿಯಾದಲ್ಲಿ ಆಯೋಜಿಸಿದ್ದ ರಫ್ತು ಪ್ರಚಾರದ ಕಾರ್ಯಾಗಾರ ಮತ್ತು ರಫ್ತು ಪ್ರಚಾರ ಮಿಷನ್, ರಫ್ತು ಕೇಂದ್ರ ಉಪಕ್ರಮವಾಗಿ ಜಿಲ್ಲೆ-ಎಫ್‌ಟಿಎ ಔಟ್ರೀಚ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಯುಗದಲ್ಲಿ ಸ್ವಂತ ಉದ್ಯೋಗ ಮಾಡಲು ಸಾವಿರಾರು ಅವಕಾಶಗಳಿವೆ. ಕೃಷಿ ಆಧಾರಿತ ಉದ್ಯಮಗಳು, ಹೈನುಗಾರಿಕೆ ಹಾಗೂ ಯಾವುದೇ ಉದ್ಯೋಗ ಆರಂಭಿಸಬಹುದು ಎಂದರು.
ಸಾವಿರಾರು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದರೂ ಶೇ. 2 ಮಂದಿ ಮಾತ್ರ ಸರ್ಕಾರಿ ಹುದ್ದೆ ಪಡೆಯುತ್ತಿದ್ದಾರೆ. ಆದ್ದರಿಂದ ಯುವಕ-ಯುವತಿಯರು ಸ್ವಂತ ಉದ್ಯೋಗ ಪ್ರಾರಂಭಿಸಬೇಕು ಎಂದರು.
ಹಾಸನ ಜಿಲ್ಲೆಯಲ್ಲಿ 10.900 ಕೈಗಾರಿಕಾ ಸಂಸ್ಥೆಗಳಿದ್ದು, 1,10,000 ಜನರಿಗೆ ಉದ್ಯೋಗ ನೀಡಿವೆ ಹಾಗೂ ಉದ್ಯಮಿದಾರರು ಆರ್ಥಿಕವಾಗಿ ಸ್ವಾವಲಂಬನೆ ಹೊಂದುತ್ತಿದ್ದಾರೆ ಎಂದು ಹೇಳಿದರು.
ಹಾಸನ ಜಿಲ್ಲೆಯಲ್ಲಿ 54 ಸಾವಿರ ಕೋಟಿಯಷ್ಟು ಸರಕು ವಿದೇಶಗಳಿಗೆ ರಫ್ತು ಆಗುತ್ತಿದ್ದು, ಇನ್ನಷ್ಟು ಅಧಿಕವಾಗಿ ಸರಕುಗಳು ರಫ್ತು ಆಗಬೇಕು ಎಂದು ತಿಳಿಸಿದರು.
ಸಣ್ಣ ಮತ್ತು ದೊಡ್ಡ ಉದ್ಯಮಗಳು ಅಂತಾರಾಷ್ಟ್ರೀಯಮಟ್ಟಕ್ಕೆ ಬೆಳೆಯುವುದಕ್ಕೆ ಈ ಕಾರ್ಯಾಗಾರ ಉತ್ತಮ ಅವಕಾಶವಾಗಿದೆ ಎಂದು ತಿಳಿಸಿದರು.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ವಿಶೇಷವಾದ ಕಾಫಿ ಬೀಜಗಳು ಹಾಗೂ ಸಾಂಬಾರ್ ಪದಾರ್ಥಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಫ್ತು ಆಗುತ್ತಿದ್ದು, ರೈತರು ಹಾಗೂ ರೈತ ಮಹಿಳೆಯರು ಸಣ್ಣ ಉದ್ಯಮವನ್ನು ಆರಂಭಿಸಿದ್ದಾರೆ, ಮುಂದೆ ಆರ್ಥಿಕವಾಗಿ ಸಬಲೀಕರಣ ಹೊಂದಬಹುದು ಎಂದು ತಿಳಿಸಿದರು.
ಐಟಿಎಸ್ ಸಹಾಯಕ ಡಿಜಿಎಫ್‌ಟಿ ಕಚೇರಿಯ ನಿರ್ದೇಶಕರಾದ ಕೆ. ಆದರ್ಶ್‌ಅವರು ಕಾರ್ಯಕ್ರಮನ್ನು ಕುರಿತು ಮಾತನಾಡಿದರು.
ಕೈಗಾರಿಕ ಜಂಟಿ ಕೃಷಿ ನಿರ್ದೇಶಕರು ವಿ.ಉಮೇಶ್ ಹಾಗೂ ಮತ್ತಿತರು ಉಪಸ್ಥಿದ್ದರು.