ಹಾಸನ ನಗರದ ಹೇಮಾವತಿ ನಗರದಲ್ಲಿ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಬಿದರಿಕೆರೆ ಜಯರಾಮ್, ನಿವಾಸಿಗಳಾದ ಚಿನ್ನೇನಹಳ್ಳಿಸ್ವಾಮಿ, ರಮೇಶ್ ಇತರರಿದ್ದರು. 
ಹಾಸನ

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
  • ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಮಾಹಿತಿ
ಹಾಸನ: ನಗರದ ಹೇಮಾವತಿ ನಗರದಲ್ಲಿ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಇತ್ತೀಚೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ರಸ್ತೆ ಕಾಮಗಾರಿ, ಚರಂಡಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಶಾಸಕರ ಗಮನ ಸೆಳೆದ ಹಿನ್ನೆಲೆಯಲ್ಲಿ, ಬಡಾವಣೆ ಸಮಸ್ಯೆಯನ್ನು ಪರಿಗಣಿಸಿ ಸುಮಾರು 1.48 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಹೇಮಾವತಿ ನಗರದ ಗಾಯತ್ರಿ ಭವನದ ರಸ್ತೆ ಹಾಗೂ ಪುಟ್ಟೇಗೌಡರ ಮನೆಯ ರಸ್ತೆ ಹಾಗೂ ನೀರು ಚರಂಡಿ ವ್ಯವಸ್ಥೆಗೆ ಅಗತ್ಯವಿರುವ ಎಲ್ಲ್ಲ ಕಾಮಗಾರಿಗಳಿಗೆ ಬಡಾವಣೆ ಜನರು ಹಾಗೂ ಜೆಡಿಎಸ್ ಮುಖಂಡರ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿಸಿದರು. ಜೆಡಿಎಸ್ ಮುಖಂಡ ಬಿದರಿಕೆರೆ ಜಯರಾಮ್, ನಿವಾಸಿಗಳಾದ ಚಿನ್ನೇನಹಳ್ಳಿಸ್ವಾಮಿ, ರಮೇಶ್ ಇತರರಿದ್ದರು.