ಚನ್ನರಾಯಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಕಾಡುಬಸವೇಶ್ವರ ಸ್ವಾಮಿ ಹಾಗೂ ಶ್ರೀವೀರಾಂಜನೇಯ ಸ್ವಾಮಿ ದೇಗುಲಗಳ ಪುನರ್ ನಿರ್ಮಾಣ ಕಾಮಗಾರಿಗೆ ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀ ಕರಿ ವೃಷಭ ಶಿವಯೋಗೀಶ್ವರ ಸ್ವಾಮೀಜಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಪರಮೇಶ್, ಪ್ರಭುಸ್ವಾಮಿ, ಶಶಿಧರ್, ನಾಗರಾಜ್, ರವೀಶ್ ಇತರರು ಇದ್ದರು.
ಚನ್ನರಾಯಪಟ್ಟಣ: ತಾಲೂಕು ಕೇಂದ್ರದ ಮಧ್ಯಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀಕಾಡುಬಸವೇಶ್ವರ ಸ್ವಾಮಿ ಹಾಗೂ ಶ್ರೀವೀರಾಂಜನೇಯ ಸ್ವಾಮಿ ದೇಗುಲಗಳು ಶಿಥಿಲಾವಸ್ಥೆಯಲ್ಲಿವೆ. ಈ ಕಾರಣ ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಡಾ. ಶ್ರೀ ಕರಿವೃಷಭ ಶಿವಯೋಗಿಶ್ವರ ಸ್ವಾಮೀಜಿ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಶ್ರೀಗಳು, ಶ್ರೀಕಾಡುಬಸವೇಶ್ವರ ಸ್ವಾಮೀಜಿ, ಶ್ರೀವೀರಾಂಜನೇಯ ಸ್ವಾಮೀಜಿ ಕ್ಷೇತ್ರದ ಮಹಿಮೆ, ಶಕ್ತಿ ಅಪಾರವಾದದ್ದು, ಈ ಜೋಡಿ ದೇಗುಲಗಳ ಜೀರ್ಣೋದ್ಧಾರ ನೆರವೇರಿದ ಮೇಲೆ ಈ ಪುಣ್ಯ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಈ ಎರಡು ದೇಗುಲಗಳ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಿನ ಶ್ರಾವಣ ಮಾಸದ ರಾಜಯೋಗದಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಎನ್. ಪರಮೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಮೆಡಿಕಲ್ ವೆಂಕಟೇಶ್, ಪುರಸಭಾ ಮಾಜಿ ಅಧ್ಯಕ್ಷರಾದ ಸಿ.ಎನ್. ಶಶಿಧರ್, ನಾಗರಾಜ್, ಅನುಸೂಯ ಪ್ರಕಾಶ್, ಪುರಸಭಾ ಮಾಜಿ ಸದಸ್ಯ ರವೀಶ್, ರವಿ, ಅಂಗಡಿ ಮಂಜುನಾಥ್, ಪತ್ರಕರ್ತ ರವಿ ನಾಕಲಗೂಡು, ಉದ್ಯಮಿ ಪ್ರಭುಸ್ವಾಮಿ, ಮುಖಂಡರಾದ ಭಕ್ತರಹಳ್ಳಿ ಪುಟ್ಟರಾಜು, ಟಿ.ವಿ. ಬಸವರಾಜ್, ಕೃಷ್ಣಣ್ಣ, ಅಂಗಡಿ ಗಣೇಶ್, ರಮೇಶ್, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯದರ್ಶಿಗಳಾದ ಕೃಪಾಶಂಕರ್, ಸುರೇಶ್, ಬಸವೇಶ್ವರ ಬೋರ್‌ವೆಲ್ ಏಜೆನ್ಸಿ ಟಿ. ಎಂ. ಗಿರೀಶ್, ಶಂಭು, ರಾಜು, ಶಿವಾನಂದ್, ಚನ್ನೇಗೌಡ, ಎಂ.ಜಿ. ಗಿರೀಶ್, ದಯಾನಂದ್, ಟಿ.ಸಿ. ನಾಗೇಶ್, ಇತರರು ಹಾಜರಿದ್ದರು.