ಶ್ರೀ ಸಂಸ್ಥಾನ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀಸದಾಶಿವ ಶಿವಾಚಾರ್ಯ ಸ್ವಾಮೀಜಿಗಳು 
ಹಾಸನ

28ರಂದು ಲಕ್ಷ ಕುಂಕುಮಾರ್ಚನೆ

ಪ್ರಮುಖ ಮುಖ್ಯಾಂಶಗಳು

  • ಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಮಾಹಿತಿ

ಆಲೂರು:

ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀಮದ್ ರಂಭಾಪುರೀ ವೀರಸಿಂಹಾಸನದ ಶಾಖಾ ಶ್ರೀ ಸಂಸ್ಥಾನ ಮಠದಲ್ಲಿ ಆ. 28ರ ಶುಕ್ರವಾರ ಲಕ್ಷ ಕುಂಕುಮಾರ್ಚನೆ ಕಾರ್ಯಕ್ರಮ ಹಮಿಕೊಳ್ಳಲಾಗಿದೆ ಎಂದು ಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಶ್ರೀಮಠದಲ್ಲಿ ನವದುರ್ಗೆ ಪರಮೇಶ್ವರಿ ಅಮನವರಿಗೆ ಕುಂಕುಮಾರ್ಚನೆ ಸೇವೆ ಸಲ್ಲಿಸುವುದು ಪ್ರತಿ ವರ್ಷದ ವಾಡಿಕೆಯಾಗಿದೆ. ಅದರಂತೆ ಅಂದು ಬೆಳಗ್ಗೆ 10 ಗಂಟೆಯಿಂದ ಧಾರ್ಮಿಕ ಕೈಂಕರ್ಯಗಳು ಪ್ರಾರಂಭವಾಗಲಿವೆ. ಸೇವೆಯಲ್ಲಿ ಭಾಗವಹಿಸುವ ಭಕ್ತರು ನೀರಿಲ್ಲದ ಹಾಗೆ ಒರೆಸಿದ 5 ಬಾಳೆ ಎಲೆ, 2 ದೀಪ, 1 ಉದ್ದರಣೆ, ಮಹಾ ಮಂಗಳಾರತಿಗೆ ಭತ್ತಿ, ಕರ್ಪೂರ, ಅಗರಬತ್ತಿ, ತೆಂಗಿನಕಾಯಿ ಹಾಗು ಬಾಳೆಹಣ್ಣು, ಮಡಿಲಕ್ಕಿ ಹಾಗು ಬಾಗಿನ ಪದಾರ್ಥಗಳನ್ನು ತರಬೇಕು. ಸೇವಾ ಶುಲ್ಕ 108 ರೂ. ಪಾವತಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.