ಕಾರ್ಯನಿರತ ಪತ್ರಕರ್ತರ ಸಂಘದ ಸಕಲೇಶಪುರ ತಾಲೂಕು ಘಟಕಕ್ಕೆ ಆಯ್ಕೆಯಾದ ಪದಾಧಿಕಾರಿಗಳು.
- ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ
ಸಕಲೇಶಪುರ: ಕಾರ್ಯನಿರತ ಪತ್ರಕರ್ತರ ಸಂಘದ ಸಕಲೇಶಪುರ ತಾಲೂಕು ಘಟಕಕ್ಕೆ (2026-28ನೇ ಸಾಲು) ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಎಸ್.ಎಲ್.ಸುಧೀರ್ ಹಾಗೂ ನವೀನ್ ಸದಾ, ಪ್ರಧಾನ ಕಾರ್ಯದರ್ಶಿಯಾಗಿ ಅಕ್ಬರ್ ಜುನೈದ್, ಕಾರ್ಯದರ್ಶಿಗಳಾಗಿ ಪ್ರವೀಣ್ ಹಾಗೂ ನವೀನ್, ಖಜಾಂಚಿಯಾಗಿ ಯೋಗೇಶ್ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹೆತ್ತೂರು ರವಿ, ಜಗದೀಶ್ ಹೊರಟ್ಟಿ, ವಿನಯ್ ವನಗೂರು, ನಿರಂಜನ್ ಮೂರ್ತಿ, ಚೇತನ್ ಹರಗರಹಳ್ಳಿ, ಶಿವಕುಮಾರ್, ಅರ್ಜುನ್ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಬೊಮ್ಮೇಗೌಡ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ನವೀನ್ ಕಾರ್ಯ ನಿರ್ವಹಿಸಿದರು.
ಸಂಘದ ಮಾಜಿ ಅಧ್ಯಕ್ಷರಾದ ಅರುಣ್ ರಕ್ಷಿದಿ, ಜಾನೆಕೆರೆ ಪರಮೇಶ್, ಮೆಹಬೂಬ್, ರವಿಕುಮಾರ್, ಜೈಭೀಮ್ ಮಂಜು , ನಿಕಟಪೂರ್ವ ಕಾರ್ಯದರ್ಶಿ ದಯಾನಂದ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಜಮೀಲ್ ಅಹಮ್ಮದ್ ಇತರರಿದ್ದರು.