ನವೋದಯ ವಿದ್ಯಾಸಂಘಕ್ಕೆ ಕಾರ್ಯದರ್ಶಿಯಾಗಿ ಆಯ್ಕೆಯಾದ ಜಲೇಂದ್ರ ಕುಮಾರ್ ಮತ್ತು ಖಜಾಂಚಿಯಾಗಿ ಮರುವನಹಳ್ಳಿ ಸಂತೋಷ್ ಅವರನ್ನು ಅಭಿನಂದಿಸಲಾಯಿತು. ಸಿ.ಜೆ.ಮಂಜುನಾಥ್, ಡಾ.ಪ್ರಮೋದ್, ಆನಂದ್ ಕಾಳೇನಹಳ್ಳಿ, ರಾಘು, ತಾ.ಒಕ್ಕಲಿಗರ ಸಂಘದ ಅಧ್ಯಕ್ಷ ಜಯಪಾಲ್, ಗೌ.ಅಧ್ಯಕ್ಷ ಶಿವೇಗೌಡ, ತಾಲೂಕು ವಕೀಲರ ಸಂಘದ ಅಧ್ಯಕ್ಷ ನಿಂಗರಾಜು ಇತರರು ಇದ್ದರು. 
ಹಾಸನ

ನವೋದಯ ವಿದ್ಯಾಸಂಘಕ್ಕೆ ಜಲೇಂದ್ರ ಕುಮಾರ್ ಕಾರ್ಯದರ್ಶಿ

ಚನ್ನರಾಯಪಟ್ಟಣ: ತಾಲೂಕಿನ ನವೋದಯ ವಿದ್ಯಾಸಂಘಕ್ಕೆ ಕಾರ್ಯದರ್ಶಿಯಾಗಿ ವಕೀಲ ಜಲೇಂದ್ರ ಕುಮಾರ್ ಮತ್ತು ಖಜಾಂಚಿಯಾಗಿ ಮರುವನಹಳ್ಳಿ ಸಂತೋಷ್ ಅವಿರೋಧವಾಗಿ ಇತ್ತೀಚೆಗೆ ಆಯ್ಕೆಯಾದರು.
13 ನಿರ್ದೇಶಕರಿರುವ ನವೋದಯ ವಿದ್ಯಾಸಂಘಕ್ಕೆ ಒಪ್ಪಂದದಂತೆ ಈ ಹಿಂದೆ ಕಾರ್ಯದರ್ಶಿಯಾಗಿದ್ದ ಶರತ್ ಕೆಂಬಾಳು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ವಕೀಲ ಜಲೇಂದ್ರ ಕುಮಾರ್ ಅವರನ್ನು ಎಲ್ಲ ನಿರ್ದೇಶಕರು ಒಮ್ಮತದಿಂದ ಕಾರ್ಯದರ್ಶಿಯಾಗಿ ಮತ್ತು ಸಹ ಕಾರ್ಯದರ್ಶಿಯಾಗಿದ್ದ ಮರುವನಹಳ್ಳಿ ಸಂತೋಷ್ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಿದರು.
ನಂತರ ಮಾತನಾಡಿದ ವಿದ್ಯಾ ಸಂಘದ ಅಧ್ಯಕ್ಷ ಸಿ.ಜೆ.ಮಂಜುನಾಥ್, ಎಲ್ಲರ ಸಹಕಾರದಿಂದ ಸಂಘದ ಅಭಿವೃದ್ಧಿಗೆ ಜಲೇಂದ್ರ ಕುಮಾರ್ ಮತ್ತು ಸಂತೋಷ್ ಶ್ರಮಿಸಲಿ ಎಂದರು.
ನಿರ್ದೇಶಕರಾದ ಡಾ.ಪ್ರಮೋದ್, ಆನಂದ್ ಕಾಳೇನಹಳ್ಳಿ, ರಾಘು, ತಾ.ಒಕ್ಕಲಿಗರ ಸಂಘದ ಅಧ್ಯಕ್ಷ ಜಯಪಾಲ್, ಗೌ.ಅಧ್ಯಕ್ಷ ಶಿವೇಗೌಡ, ತಾಲೂಕು ವಕೀಲರ ಸಂಘದ ಅಧ್ಯಕ್ಷ ನಿಂಗರಾಜು ಇತರರು ಇದ್ದರು.